ADVERTISEMENT

ನೇಪಾಳ: ದಾಖಲೆಯ 10ನೇ ಬಾರಿ ಎವರೆಸ್ಟ್‌ ಏರಿದ ಶೆರ್ಪಾ ಮಹಿಳೆ

ಏಜೆನ್ಸೀಸ್
Published 12 ಮೇ 2022, 11:10 IST
Last Updated 12 ಮೇ 2022, 11:10 IST
ಲಕ್ಪಾ ಶೆರ್ಪಾ
ಲಕ್ಪಾ ಶೆರ್ಪಾ   

ಕಠ್ಮಂಡು: ಲಕ್ಪಾ ಶೆರ್ಪಾ ಎಂಬ ಮಹಿಳಾ ಪರ್ವತಾರೋಹಿಯೊಬ್ಬರು 10ನೇ ಬಾರಿ ಮೌಂಟ್‌ ಎವರೆಸ್ಟ್‌ ಏರುವ ಮೂಲಕ ತಮ್ಮದೇ ದಾಖಲೆ ಮುರಿದಿದ್ದಾರೆ. ಅಲ್ಲದೇ, ಅತಿ ಹೆಚ್ಚು ಬಾರಿ ಎವರೆಸ್ಟ್‌ ಪರ್ವತವನ್ನು ಏರಿದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

‘ಲಕ್ಪಾ ಹಾಗೂ ಇತರ ಪರ್ವತಾರೋಹಿಗಳು 29,032 ಅಡಿ ಎತ್ತರದ ಪರ್ವತವನ್ನು ಗುರುವಾರ ಬೆಳಿಗ್ಗೆ ಏರಿದ್ಧಾರೆ. ಅವರ ಪರ್ವತಾರೋಹಣಕ್ಕೆ ಹವಾಮಾನವೂ ಅನುಕೂಲಕರವಾಗಿತ್ತು. ಅವರು ಪರ್ವತದಿಂದ ಕೆಳಗೆ ಇಳಿದಿದ್ದು, ಅವರ ಆರೋಗ್ಯ ಸ್ಥಿರವಾಗಿದೆ’ ಎಂದು ಲಕ್ಪಾ ಸಹೋದರ ಹಾಗೂ ಪರ್ವತಾರೋಹಣ ಸಂಘಟಕ ಮಿಂಗ್ಮಾ ಗೆಲು ಹೇಳಿದರು.

ನೇಪಾಳ ಮೂಲದವರಾದ 48 ವರ್ಷದ ಲಕ್ಪಾ ಶೆರ್ಪಾ, ಅಮೆರಿಕದ ವೆಸ್ಟ್‌ ಹಾರ್ಟ್‌ಫೋರ್ಡ್‌ನಲ್ಲಿ ನೆಲೆಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.