ADVERTISEMENT

ಮಿನಿಯಾಪೊಲಿಸ್‌ನಲ್ಲಿ ಶೂಟಿಂಗ್; ಒಂದು ಸಾವು, 11 ಮಂದಿಗೆ ಗಾಯ

ಏಜೆನ್ಸೀಸ್
Published 21 ಜೂನ್ 2020, 11:21 IST
Last Updated 21 ಜೂನ್ 2020, 11:21 IST
ಮಿನಿಯಾಪೊಲಿಸ್‌ನಲ್ಲಿ  ಶೂಟಿಂಗ್‌ ನಡೆದ ಸ್ಥಳ (ಕೃಪೆ: ಟ್ವಿಟರ್ )
ಮಿನಿಯಾಪೊಲಿಸ್‌ನಲ್ಲಿ ಶೂಟಿಂಗ್‌ ನಡೆದ ಸ್ಥಳ (ಕೃಪೆ: ಟ್ವಿಟರ್ )   

ಮಿನಿಯಾಪೊಲಿಸ್: ಮಿನಿಯಾಪೊಲಿಸ್‌ನಲ್ಲಿ ನಡೆದ ಶೂಟಿಂಗ್‌ನಲ್ಲಿ ಒಬ್ಬರು ಸತ್ತಿದ್ದು, ಇತರೆ ಹನ್ನೊಂದು ಮಂದಿ ಗಾಯಗೊಂಡಿದ್ದಾರೆ. ಮೃತನ ಗುರುತು ಪತ್ತೆಯಾಗಿಲ್ಲ.

10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮೊದಲು ತಿಳಿಸಿದ್ದ ಪೊಲೀಸ್‌ ಅಧಿಕಾರಿಗಳು, ಬಳಿಕ 11 ಜನರಿಗೆ ಅಲ್ಪಪ್ರಮಾಣದ ಗಾಯಗಳಾಗಿವೆ ಎಂದು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದರು.

ಬಹುತೇಕ ಬಾರ್‌, ರೆಸ್ಟೋರಂಟ್‌ಗಳೇ ಇರುವ ಇಲ್ಲಿನ ಅಪ್‌ಟೌನ್‌ ಮಿನಿಯಾಪೊಲಿಸ್‌ನ ಪ್ರದೇಶಕ್ಕೆ ತೆರಳುವುದರಿಂದ ದೂರ ಉಳಿಯಬೇಕು ಎಂದು ಪೊಲೀಸರು ಮೊದಲು ಜನರಿಗೆ ಸಲಹೆ ಮಾಡಿದ್ದರು. ಕೊರೊನಾ ಕಾರಣದಿಂದ ಆರು ವಾರ ಬಂದ್‌ ಆಗಿದ್ದ ವಾಣಿಜ್ಯ ಚಟುವಟಿಕೆಗಳು ಜೂನ್‌ 1ರಂದಷ್ಟೇ ಪುನಾರಂಭಗೊಂಡಿದ್ದವು.

ADVERTISEMENT

ಜಾರ್ಜ್‌ ಫ್ಲಾಯ್ಡ್‌ ಸಾವಿನ ಘಟನೆ ಹಿನ್ನೆಲೆಯಲ್ಲಿ ಮೇ 25ರ ಬಳಿಕ ಸುಮಾರು 5 ಕಿ.ಮೀ ವ್ಯಾಪ್ತಿಯಲ್ಲಿ ಈ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.