ADVERTISEMENT

ಬ್ರೆಜಿಲ್‌: ಶಾಲೆಗಳಿಗೆ ನುಗ್ಗಿ ಗುಂಡಿನ ದಾಳಿ, 3 ಸಾವು, 11 ಮಂದಿಗೆ ಗಾಯ

ಪಿಟಿಐ
Published 26 ನವೆಂಬರ್ 2022, 2:17 IST
Last Updated 26 ನವೆಂಬರ್ 2022, 2:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬ್ರೆಸಿಲಿಯಾ: ಬ್ರೆಜಿಲ್‌ನಲ್ಲಿ ಬುಲೆಟ್‌ಪ್ರೂಫ್‌ ಧರಿಸಿದ್ದ ದಾಳಿಕೋರನೊಬ್ಬ ಎರಡು ಶಾಲೆಗಳಿಗೆ ನುಗ್ಗಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಕೃತ್ಯದಲ್ಲಿ ಇಬ್ಬರು ಶಿಕ್ಷಕರು, ಓರ್ವ ವಿದ್ಯಾರ್ಥಿ ಪ್ರಾಣ ಕಳೆದುಕೊಂಡಿದ್ದಾರೆ. 11 ಮಂದಿ ಗಾಯಗೊಂಡಿದ್ದಾರೆ.

ಬ್ರೆಜಿಲ್‌ನ ಆಗ್ನೇಯ ಭಾಗದ ಎಸ್ಪಿರಿಟೊ ಸ್ಯಾಂಟೊ ರಾಜ್ಯದ ಅರಕ್ರುಜ್‌ನ ಸಣ್ಣ ಪಟ್ಟಣದಲ್ಲಿ ಘಟನೆ ಸಂಭವಿಸಿದೆ. ಒಂದೇ ಬೀದಿಯಲ್ಲಿದ್ದ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮೇಲೆ ಸೆಮಿ ಅಟೋಮ್ಯಾಟಿಕ್‌ ಪಿಸ್ತೂಲ್‌ನೊಂದಿಗೆ ನುಗ್ಗಿದ ದುಷ್ಕರ್ಮಿ ಗುಂಡಿನ ದಾಳಿ ನಡೆಸಿದ್ದಾನೆ.

ಮುಖಗವಸು ಧರಿಸಿದ್ದರಿಂದ ದುಷ್ಕರ್ಮಿಯ ಗುರುತು ಸಿಕ್ಕಿಲ್ಲ. ಕೃತ್ಯವು ಸಿಸಿಟಿವಿಯಲ್ಲಿ ದಾಖಲಾಗಿದೆ. ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೃತ್ಯಕ್ಕೆ ಸಂಬಂಧಿಸಿ ತನಿಖೆ ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT