ADVERTISEMENT

Axiom-4 mission: ಗಗನಯಾನಿ ಶುಭಾಂಶು ಶುಕ್ಲಾ ಮತ್ತಿತರರು ಮಧ್ಯಾಹ್ನ 3ಕ್ಕೆ ಆಗಮನ

ಪಿಟಿಐ
Published 15 ಜುಲೈ 2025, 7:28 IST
Last Updated 15 ಜುಲೈ 2025, 7:28 IST
   

ನವದೆಹಲಿ: ವಾಣಿಜ್ಯ ಉದ್ದೇಶಿತ ಆಕ್ಸಿಯಂ -4 ಮಿಷನ್‌ನ ಭಾಗವಾಗಿ ಗಗನಯಾನ ಕೈಗೊಂಡಿದ್ದ ಗಗನಯಾನಿಗಳಾದ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಮಂಗಳವಾರ ಮಧ್ಯಾಹ್ನ 3.01ರ ಸುಮಾರಿಗೆ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೊದಲ್ಲಿ ಬಂದು ಇಳಿಯುವ ಸಾಧ್ಯತೆ ಇದೆ.

18 ದಿನಗಳ ವಾಸ್ತವ್ಯದ ನಂತರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಟಿರುವ ಗಗನಯಾನಿಗಳು 22.5 ಗಂಟೆಗಳ ಪ್ರಯಾಣ ಮಾಡಿ ಭೂಮಿಗೆ ತಲುಪುತ್ತಿದ್ದಾರೆ.

ಶುಕ್ಲಾ, ಕಮಾಂಡರ್ ಪೆಗ್ಗಿ ವಿಟ್ಸನ್ ಮತ್ತು ಮಿಷನ್ ತಜ್ಞರಾದ ಪೋಲೆಂಡ್‌ನ ಸ್ಲಾವೊಸ್ಜ್ ಉಜ್ನಾನ್‌ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಅವರನ್ನು ಹೊತ್ತ ಡ್ರ್ಯಾಗನ್ 'ಗ್ರೇಸ್' ಬಾಹ್ಯಾಕಾಶ ನೌಕೆ ಸೋಮವಾರ ಸಂಜೆ 4:45ಕ್ಕೆ ಬಾಹ್ಯಾಕಾಶ ನಿಲ್ದಾಣದಿಂದ ಹೊರಟಿದೆ.

ADVERTISEMENT

ಡ್ರ್ಯಾಗನ್ ಮತ್ತು ಆ್ಯಕ್ಸಿಯಂ ಸ್ಪೇಸ್ ಎಎಕ್ಸ್-4 ಸಿಬ್ಬಂದಿ ನಾಳೆ (ಮಂಗಳವಾರ ಮಧ್ಯಾಹ್ನ 3:01 ಐಎಸ್‌ಟಿ) ಸ್ಥಳೀಯ ಕಾಲಮಾನ ಬೆಳಗಿನ ಜಾವ 2:31ಕ್ಕೆ ಸ್ಯಾನ್ ಡಿಯಾಗೊ ಕರಾವಳಿಯಲ್ಲಿ ಇಳಿಯುವ ಹಾದಿಯಲ್ಲಿದ್ದಾರೆ ಎಂದು ಆ್ಯಕ್ಸಿಯಂ-4 ಕಾರ್ಯಾಚರಣೆಯ ಸ್ಪೇಸ್‌ಎಕ್ಸ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.

ಪೆಸಿಫಿಕ್ ಮಹಾಸಾಗರದಲ್ಲಿ ಇಳಿಯುವ ಮೊದಲು ಬಾಹ್ಯಾಕಾಶ ನೌಕೆಯು ಗುಡುಗಿನಂತೆ ಶಬ್ಧ ಮಾಡುವ ಮೂಲಕ ತನ್ನ ಆಗಮನವನ್ನು ಘೋಷಿಸುತ್ತದೆ ಎಂದು ಅದು ಹೇಳಿದೆ.

ಗಗನಯಾನಿಗಳು ಇಳಿಯಲು ಪ್ಯಾರಾಚೂಟ್‌ಗಳನ್ನು ಎರಡು ಹಂತಗಳಲ್ಲಿ ನಿಯೋಜಿಸಲಾಗುತ್ತದೆ. ಮೊದಲನೇಯದ್ದನ್ನು ಸುಮಾರು 5.7 ಕಿ.ಮೀ ಎತ್ತರದಲ್ಲಿ ಸ್ಥಿರಗೊಳಿಸಲಾಗುತ್ತದೆ. ನಂತರ ಮುಖ್ಯ ಪ್ಯಾರಾಚೂಟ್‌ ಅನ್ನು ಸರಿ ಸುಮಾರು ಎರಡು ಕಿ.ಮೀ ದೂರದಲ್ಲಿ ಇರಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.