ADVERTISEMENT

ಲಂಡನ್‌: ’ಫ್ಳೈಯಿಂಗ್‌ ಸಿಖ್‌’ ಮಲಿಕ್‌ ಪ್ರತಿಮೆ ಸ್ಥಾಪನೆಗೆ ಅಸ್ತು

ಪಿಟಿಐ
Published 8 ಮಾರ್ಚ್ 2021, 4:21 IST
Last Updated 8 ಮಾರ್ಚ್ 2021, 4:21 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಂಡನ್‌: ‘ಫ್ಲೈಯಿಂಗ್‌ ಸಿಖ್‌’ ಎಂದೇ ಖ್ಯಾತರಾಗಿದ್ದ, ಮೊದಲ ಜಾಗತಿಕ ಯುದ್ಧದಲ್ಲಿ ಬ್ರಿಟನ್‌ನ ರಾಯಲ್‌ ಫ್ಲೈಯಿಂಗ್‌ ಕಾರ್ಪ್ಸ್‌ನ ಸದಸ್ಯರಾಗಿ ಅಪ್ರತಿಮ ಸಾಹಸ ಮೆರೆದಿದ್ದ ಹರ್ದಿತ್‌ ಸಿಂಗ್‌ ಮಲಿಕ್‌ ಅವರ ಪ್ರತಿಮೆ ಸ್ಥಾಪನೆಗೆ ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಅನುಮೋದನೆ ನೀಡಿದೆ.

ಜಾಗತಿಕ ಯುದ್ಧಗಳಲ್ಲಿ ಬ್ರಿಟನ್‌ ಪರ ಹೋರಾಡಿ, ಹುತಾತ್ಮರಾದ ಭಾರತೀಯರ ಸ್ಮರಣಾರ್ಥ, ಬಂದರು ನಗರ ಸೌಥಾಂಪ್ಟನ್‌ನಲ್ಲಿ ಮಲಿಕ್‌ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುತ್ತದೆ.

ರಾಯಲ್‌ ಫ್ಲೈಯಿಂಗ್‌ ಕಾರ್ಪ್ಸ್‌ ಅನ್ನು ಈಗ ರಾಯಲ್‌ ಏರ್‌ಫೋರ್ಸ್‌ ಎಂದು ಕರೆಯಲಾಗುತ್ತಿದೆ.

ADVERTISEMENT

14 ವರ್ಷದವರಾಗಿದ್ದಾಗ, 1908ರಲ್ಲಿ ಮಲಿಕ್‌ ಅವರು ಬ್ರಿಟನ್‌ಗೆ ತೆರಳುತ್ತಾರೆ. ಆಕ್ಸ್‌ಫರ್ಡ್‌ ಯೂನಿವರ್ಸಿಟಿಯಲ್ಲಿ ಅಧ್ಯಯನದ ನಂತರ ಪೈಲಟ್‌ ತರಬೇತಿ ಪೂರೈಸುತ್ತಾರೆ. ಬ್ರಿಟನ್‌ ಸೈನ್ಯಕ್ಕೆ ಸೇರ್ಪಡೆಯಾದ ಮೊದಲ ಭಾರತೀಯ ಹಾಗೂ ಪೇಟ ಧರಿಸಿದ ಪೈಲಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಮಲಿಕ್‌, ಅವರಿಗಾಗಿಯೇ ವಿನ್ಯಾಸಗೊಳಿಸಿದ್ದ ವಿಶಿಷ್ಟವಾದ ಹೆಲ್ಮೆಟ್‌ನಿಂದಲೂ ಖ್ಯಾತರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.