ADVERTISEMENT

ಸಿಲಿಕಾನ್ ವ್ಯಾಲಿ ಬ್ಯಾಂಕ್‌ ದಿವಾಳಿ: ಠೇವಣಿದಾರರಿಗೆ ಹಣ ವಾಪಸ್‌- ಸರ್ಕಾರ

ಪಿಟಿಐ
Published 14 ಮಾರ್ಚ್ 2023, 6:07 IST
Last Updated 14 ಮಾರ್ಚ್ 2023, 6:07 IST
   

ವಾಷಿಂಗ್ಟನ್: ಸಿಲಿಕಾನ್ ವ್ಯಾಲಿ ಬ್ಯಾಂಕ್‌ ಹಾಗೂ ಸಿಗ್ನೆಚರ್‌ ಬ್ಯಾಂಕ್‌ನಲ್ಲಿ ಹಣ ಇರಿಸಿರುವವರು ತಮ್ಮ ಹಣವನ್ನು ಮತ್ತೆ ಪಡೆಯಬಹುದು ಎಂದು ಅಮೆರಿಕ ಸರ್ಕಾರ ಹೇಳಿದೆ.

ನಿನ್ನೆಯಿಂದ ಠೇವಣಿದಾರರ ಹಣವನ್ನು ನೀಡಲಾಗುತ್ತಿದೆ ಎಂದು ಹಣಕಾಸು ಇಲಾಖೆ ತಿಳಿಸಿದೆ.

ಸಿಲಿಕಾನ್ ವ್ಯಾಲಿ ಬ್ಯಾಂಕ್‌ ಹಾಗೂ ಸಿಗ್ನೆಚರ್‌ ಬ್ಯಾಂಕ್‌ಗೆ ಆಗುವ ನಷ್ಟವನ್ನು ತೆರಿಗೆದಾರರಿಂದ ಭರ್ತಿ ಮಾಡಿಕೊಳ್ಳುವುದಿಲ್ಲ ಎಂದು ಅಮೆರಿಕದ ಫೆಡರಲ್ ರಿಸರ್ವ್‌ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಅಮೆರಿಕದ ಅರ್ಥ ವ್ಯವಸ್ಥೆಯನ್ನು ರಕ್ಷಿಸುವ ಹಾಗೂ ದೇಶದ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಸಾರ್ವಜನಿಕರು ಇರಿಸಿರುವ ನಂಬಿಕೆಯನ್ನು ಬಲಪಡಿಸುವ ಉದ್ದೇಶದಿಂದ ಅಮೆರಿಕ ಸರ್ಕಾರ ಈ ಕ್ರಮ ಕೈಗೊಂಡಿದೆ.

ಸಿಲಿಕಾನ್ ವ್ಯಾಲಿ ಬ್ಯಾಂಕ್ ಹಾಗೂ ಸಿಗ್ನೆಚರ್‌ ಬ್ಯಾಂಕ್‌ ನಷ್ಟದಿಂದಾಗಿ ಬಾಗಿಲು ಮುಚ್ಚಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.