ADVERTISEMENT

ಕೋವಿಡ್‌ ಲಸಿಕೆ ಪಡೆದವರಿಗೆ ರಸ್ತೆ ಮಾರ್ಗ ತೆರೆಯಲು ಸಿಂಗಪುರ, ಮಲೇಷ್ಯಾ ನಿರ್ಧಾರ

ರಾಯಿಟರ್ಸ್
Published 24 ನವೆಂಬರ್ 2021, 14:09 IST
Last Updated 24 ನವೆಂಬರ್ 2021, 14:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‌‌ಸಿಂಗಪುರ: ಕೋವಿಡ್‌ ಲಸಿಕೆಯ ಎರಡೂ ಡೋಸ್‌ಗಳನ್ನು ಹಾಕಿಸಿಕೊಂಡವರಿಗೆ ರಸ್ತೆ ಮಾರ್ಗವನ್ನು ತೆರೆಯಲು ಸಿಂಗಪುರ ಮತ್ತುಮಲೇಷ್ಯಾ ಸರ್ಕಾರ ನಿರ್ಧರಿಸಿದೆ.

ನವೆಂಬರ್‌ 29ರಿಂದ ಇದು ಜಾರಿಗೆ ಬರಲಿದ್ದು, ಚಂಗಿ ವಿಮಾನ ನಿಲ್ದಾಣ ಮತ್ತು ಕ್ವಾಲಾಲಂಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ವಿಸ್ತರಿಸಲಾಗುವುದು ಎಂದು ಪ‍್ರಕಟಣೆಯಲ್ಲಿ ತಿಳಿಸಲಾಗಿದೆ.

‘ಮೊದಲ ಹಂತದಲ್ಲಿ ಕೇವಲ ನಾಗರಿಕರು, ಶಾಶ್ವತ ನಿವಾಸಿ ಅಥವಾ ದೀರ್ಘಕಾಲದ ಪಾಸ್‌ ಹೊಂದಿದವರಿಗೆ ಮಾತ್ರ ಈ ಲೇನ್‌ ಬಳಸಲು ಅನುಮತಿ ನೀಡಲಾಗುವುದು. ಬಳಿಕ ಇದನ್ನು ವಿಸ್ತರಿಸಲಾಗುವುದು’ ಎಂದು ಸಿಂಗಪುರದ ಪ್ರಧಾನಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.ಈ ಬಗ್ಗೆ ಮಲೇಷ್ಯಾ ಪ್ರತ್ಯೇಕ ಘೋಷಣೆಯನ್ನು ಮಾಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.