ADVERTISEMENT

ಹಾಂಗ್‌ಕಾಂಗ್‌: ಸ್ಫೋಟಕಗಳ ತಯಾರಿಕೆ ಆರೋಪದಡಿ 9 ಮಂದಿ ಬಂಧನ

ಏಜೆನ್ಸೀಸ್
Published 6 ಜುಲೈ 2021, 8:28 IST
Last Updated 6 ಜುಲೈ 2021, 8:28 IST
ಹಾಂಗ್‌ಕಾಂಗ್‌ನಲ್ಲಿ ಸ್ಪೋಟಕ್ಕೆ ಸಂಚು ಹೂಡಿದ್ದ ಆರೋಪಿಗಳಿಂದ ವಶಕ್ಕೆ ಪಡೆದ ವಸ್ತುಗಳು –ಎಎಫ್‌ಪಿ ಚಿತ್ರ
ಹಾಂಗ್‌ಕಾಂಗ್‌ನಲ್ಲಿ ಸ್ಪೋಟಕ್ಕೆ ಸಂಚು ಹೂಡಿದ್ದ ಆರೋಪಿಗಳಿಂದ ವಶಕ್ಕೆ ಪಡೆದ ವಸ್ತುಗಳು –ಎಎಫ್‌ಪಿ ಚಿತ್ರ   

ಹಾಂಗ್‌ಕಾಂಗ್‌: ‘ಪ್ರಬಲ ಸ್ಫೋಟಕಗಳ ತಯಾರಿಕೆ ಆರೋಪದಡಿ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ. ಇದರಲ್ಲಿ ಆರು ಮಂದಿಪ್ರೌಢಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ’ ಎಂದು ಪೊಲೀಸರು ಮಂಗಳವಾರ ತಿಳಿಸಿದರು.

15 ರಿಂದ 39 ವಯಸ್ಸಿನೊಳಗಿನ ಐದು ಮಂದಿ ಯುವಕರು ಮತ್ತು ನಾಲ್ವರು ಯುವತಿಯರನ್ನು ಸೋಮವಾರ ಬಂಧಿಸಲಾಗಿದೆ. ಆರೋಪಿಗಳು ಭಯೋತ್ಪದನಾ ಚಟುವಟಿಕೆಗಳಿಗಾಗಿ ಸ್ಫೋಟಕಗಳನ್ನು ಬಳಸಲು ಸಂಚು ಹೂಡಿದ್ದರು ಎಂದು ಶಂಕಿಸಲಾಗಿದೆ.

‘ಹಾಸ್ಟೆಲ್‌ನಲ್ಲಿ ದೇಶಿಯವಾಗಿ ನಿರ್ಮಿಸಿದ ಪ್ರಯೋಗಾಲಯದಲ್ಲಿ ಸ್ಫೋಟಕಗಳನ್ನು ತಯಾರಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಳ್ಳಲಾಯಿತು’ ಎಂದು ಹೊಸ ರಾಷ್ಟ್ರೀಯ ಭದ್ರತಾ ಘಟಕದ ಹಿರಿಯ ಅಧೀಕ್ಷಕ ಸ್ಟೀವ್ ಲಿ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಕ್ರಾಸ್-ಹಾರ್ಬರ್ ಸುರಂಗ, ರೈಲ್ವೆ ನೆಟ್‌ವರ್ಕ್ ಮತ್ತು ನ್ಯಾಯಾಲಯದ ಕೊಠಡಿಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ದಾಳಿ ನಡೆಸಲು ಆರೋಪಿಗಳು ಸಂಚು ರೂಪಸಿದ್ದರು’ ಎಂದು ಸ್ಟೀವ್‌ ಲೀ ಅವರು ತಿಳಿಸಿದರು.

‘ಬಂಧಿತರಿಂದ ಹಲವು ಸಣ್ಣ ಸ್ಫೋಟಕಗಳು, ಕಚ್ಚಾ ವಸ್ತುಗಳು, ಏರ್ ಗನ್, ಮೊಬೈಲ್ ಫೋನ್, ಸಿಮ್ ಕಾರ್ಡ್‌ಗಳು, ಬಾಂಬ್‌ ಆಪರೇಟಿಂಗ್‌ ಮ್ಯಾನುವಲ್‌ಗಳು ಮತ್ತು ನಗದನ್ನು ವಶಕ್ಕೆ ಪಡೆಯಲಾಗಿದೆ. ದಾಳಿಯ ಬಳಿಕ ಅವರು ನಗರ ತೊರೆದು ಹೋಗಲು ಯೋಜನೆ ರೂಪಿಸಿದ್ದರು’ ಎಂದು ಪೊಲೀಸರು ಮಂಗಳವಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.