ADVERTISEMENT

ಪಾಕಿಸ್ತಾನ: ಆರು ಉಗ್ರರ ಹತ್ಯೆ

ಪಿಟಿಐ
Published 23 ಫೆಬ್ರುವರಿ 2023, 14:04 IST
Last Updated 23 ಫೆಬ್ರುವರಿ 2023, 14:04 IST
   

ಪೆಶಾವರ (ಪಿಟಿಐ): ಖೈಬರ್‌ ಪಂಕ್‌ತೂನಿಖಾ ಪ್ರಾಂತ್ಯದ ಅಬ್ಬಾಸ್‌ ಕಾಟಕ್‌ನಲ್ಲಿರುವ ಪೊಲೀಸ್‌ ಪೋಸ್ಟ್‌ನ ಮೇಲೆ ದಾಳಿ ನಡೆಸಲು ಯೋಜಿಸಲಾಗಿದೆ ಎಂಬ ಗುಪ್ತಚರ ಮಾಹಿತಿ ಮೇರೆಗೆ ಪಾಕಿಸ್ತಾನದ ಭದ್ರತಾ ಪಡೆಗಳು ತೆಹ್ರೀಕ್‌-ಇ-ತಾಲಿಬಾನ್‌ನ ಆರು ಉಗ್ರರನ್ನು ಗುರುವಾರ ಹತ್ಯೆ ಮಾಡಿವೆ.

‘ಭಯೋತ್ಪಾದನೆ ನಿಗ್ರಹ ಇಲಾಖೆ ಹಾಗೂ ಲಕ್ಕಿ ಮಾರ್ವತ್ ಜಿಲ್ಲೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ದಾಳಿ ನಡೆದಿದೆ’ ಎಂದು ಪೊಲೀಸರು ತಿಳಿಸಿದರು. ‘ಉಗ್ರರ ಬಳಿ ಇದ್ದ ಶಸ್ತ್ರಾಸ್ತ್ರ, ಗ್ರೆನೇಡ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ’ ಎಂದು ಅವರು ಹೇಳಿದರು.

ಅಫ್ಗಾನಿಸ್ತಾನವನ್ನು ತಾಲಿಬಾನ್‌ ತನ್ನ ವಶಕ್ಕೆ ಪಡೆದುಕೊಂಡ ಬಳಿಕ ಪಾಕಿಸ್ತಾನದಲ್ಲಿ ತೆಹ್ರೀಕ್‌–ಇ–ತಾಲಿಬಾನ್‌ ತನ್ನ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸಿದೆ. ಇತ್ತೀಚಿನ ಕೆಲವು ತಿಂಗಳಲ್ಲಿ ಈ ಸಂಘಟನೆ ಹಲವು ದಾಳಿಗಳನ್ನು ನಡೆಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.