ADVERTISEMENT

ಧೂಮಪಾನದಿಂದ ಕೋವಿಡ್‌ ಸೋಂಕಿನ ತೀವ್ರತೆ, ಸಾವು ಹೆಚ್ಚಾಗುವ ಸಾಧ್ಯತೆ: ಅಧ್ಯಯನ

ಪಿಟಿಐ
Published 28 ಸೆಪ್ಟೆಂಬರ್ 2021, 9:14 IST
Last Updated 28 ಸೆಪ್ಟೆಂಬರ್ 2021, 9:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಂಡನ್‌: ಧೂಮಪಾನದಿಂದಾಗಿ ಕೋವಿಡ್‌ ರೋಗಿಗಳಲ್ಲಿ ಸೋಂಕು ತೀವ್ರಗೊಳ್ಳುವ ಜೊತೆಗೆ, ಸಾವನ್ನಪ್ಪುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ಬಹುತೇಕ ಅಧ್ಯಯನಗಳ ಪ್ರಕಾರ, ಕೋವಿಡ್‌ ಸೋಂಕು ಹೆಚ್ಚಾಗಲು ಧೂಮಪಾನ ಮುಖ್ಯ ಕಾರಣ. ಆದರೆ, ಇದುವರೆಗೆ ನಡೆದಿರುವ ವಿವಿಧ ಸಂಶೋಧನೆಗಳ ಪ್ರಕಾರ, ವಾಸ್ತವವಾಗಿ ಖಚಿತ ಕಾರಣವನ್ನು ಪತ್ತೆ ಮಾಡಲು ಆಗಿಲ್ಲ. ಜರ್ನಲ್‌ ಥೋರಾಕ್ಸ್‌ನಲ್ಲಿ ಪ್ರಕಟಿಸಲಾದ ನೂತನ ಅಧ್ಯಯನದ ಪ್ರಕಾರ, ಧೂಮಪಾನ ಮತ್ತು ಕೋವಿಡ್ ಕುರಿತ ಅಂಕಿ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗದೊರೆತಫಲಿತಾಂಶವು ಈಶಂಕೆಯನ್ನು ಬಲಪಡಿಸಿದೆ.

‘ನಮ್ಮ ಸಂಶೋಧನೆಯ ಫಲಿತಾಂಶವು ಕೋವಿಡ್‌ ಗಂಭೀರವಾಗಲು ಧೂಮಪಾನವೇ ಕಾರಣ ಎಂಬುದನ್ನು ಇನ್ನಷ್ಟು ಬಲಪಡಿಸಿದೆ. ಧೂಮಪಾನ ಹೃದಯ ಸಂಬಂಧಿ ಸಮಸ್ಯೆಗಳು, ಕ್ಯಾನ್ಸರ್‌ ಸಮಸ್ಯೆಗಳಿಗೂ ಕಾರಣವಾಗಲಿದೆ. ಧೂಮಪಾನಕ್ಕೆ ಅನ್ವಯಿಸಿ ಹೇಳಲಾದಈ ಅಂಶಗಳು ಸಮಾನವಾಗಿ ಕೋವಿಡ್‌ಗೂ ಅನ್ವಯವಾಗಲಿದೆ ಎನ್ನುತ್ತಾರೆ‘ ತಂಡದ ಮುಖ್ಯ ಸಂಶೋಧಕಿಯಾಗಿರುವ ಆಶ್ಲ್ಯೆ ಕ್ಲಿಫ್ಟ್‌.

ADVERTISEMENT

‘ಹಾಗಾಗಿ ಸಿಗರೇಟ್ ಸೇದುವುದನ್ನು ತ್ಯಜಿಸಲು ಮತ್ತು ಧೂಮಪಾನವನ್ನು ಕೈಬಿಡಲು ಇದು ಉತ್ತಮ ಸಮಯ‘ ಎಂದು ಕ್ಲಿಫ್ಟ್ ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.