

ಝಿಝಿ ಕೊಡ್ವಾ
ಜೊಹಾನೆಸ್‌ಬರ್ಗ್: ಲಂಚ ಪಡೆದ ಆರೋಪದ ಮೇಲೆ ದಕ್ಷಿಣ ಆಫ್ರಿಕಾದ ಸಚಿವ ಝಿಝಿ ಕೊಡ್ವಾ ಅವರನ್ನು ಬುಧವಾರ ಬಂಧಿಸಲಾಗಿದೆ.
ಕ್ರೀಡಾ, ಕಲೆ ಮತ್ತು ಸಂಸ್ಕೃತಿ ಖಾತೆಗಳನ್ನು ಹೊಂದಿರುವ ಕೊಡ್ವಾ, ಉದ್ಯಮಿಯೊಬ್ಬರಿಂದ 90 ಸಾವಿರ ಡಾಲರ್ ( ₹75ಲಕ್ಷ) ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ.
ಲಂಚ ಪಡೆದ ಹಣವನ್ನು ಐಷಾರಾಮಿ ಎಸ್‌ಯುವಿ ವಾಹನಗಳನ್ನು ಖರೀದಿಸಲು ಇವರು ಬಳಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಡ್ವಾ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.