ADVERTISEMENT

ಜೊಹಾನಸ್‌ಬರ್ಗ್‌ | ನಿರ್ಮಾಣ ಹಂತದ ದೇಗುಲ ಕುಸಿತ: ಭಾರತೀಯನ ಸಾವು

ಪಿಟಿಐ
Published 14 ಡಿಸೆಂಬರ್ 2025, 15:37 IST
Last Updated 14 ಡಿಸೆಂಬರ್ 2025, 15:37 IST
   

ಜೊಹಾನಸ್‌ಬರ್ಗ್‌: ದಕ್ಷಿಣ ಆಫ್ರಿಕಾದ ಕ್ವಾಜುಲು– ನತಾಲ್ ಪ್ರಾಂತ್ಯದಲ್ಲಿ ನಿರ್ಮಾಣ ಹಂತದ ನಾಲ್ಕು ಅಂತಸ್ತಿನ ಹಿಂದೂ ದೇವಾಲಯ ಕುಸಿದಿದ್ದು, ನಾಲ್ವರು ಮೃತಪಟ್ಟಿದ್ದಾರೆ.

ನಿರ್ಮಾಣ ಹಂತದ ಅಹೋಬಿಲಂ ದೇವಸ್ಥಾನದ ಕಟ್ಟಡ ಕುಸಿದು ಈ ದುರ್ಘಟನೆ ಸಂಭವಿಸಿದೆ. ಭಾರತೀಯ ಸಂಜಾತ ವಿಕ್ಕಿ ಜೈರಾಜ್ ಪಾಂಡೆ (52) ಸಹ ಈ ದುರ್ಘಟನೆಯಲ್ಲಿ ಮೃತರಾಗಿದ್ದು, ದೇವಾಲಯದ ಟ್ರಸ್ಟ್‌ನ ಕಾರ್ಯನಿರ್ವಾಹಕ ಸದಸ್ಯ ಹಾಗೂ ನಿರ್ಮಾಣ ಯೋಜನೆಯ ವ್ಯವಸ್ಥಾಪಕರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಕುಸಿದು ಬಿದ್ದ ದೇಗುಲ ಕಟ್ಟಡದ ಅವಶೇಷದ ಕೆಳಭಾಗದಲ್ಲಿ ಎಷ್ಟು ಜನರು ಸಿಲುಕಿದ್ದಾರೆ ಎಂಬ ನಿಖರ ಸಂಖ್ಯೆ ಗೊತ್ತಾಗಿಲ್ಲ ಎಂದಿದ್ದಾರೆ.

ADVERTISEMENT

ಕಟ್ಟಡ ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರೊಬ್ಬರು ಮತ್ತು ಭಕ್ತರೊಬ್ಬರು ಶುಕ್ರವಾರ ಮೃತಪಟ್ಟರೆ, ರಕ್ಷಣಾ ಕಾರ್ಯಾಚರಣೆ ಸಂದರ್ಭ ಇಬ್ಬರ ಶವಗಳು ಶನಿವಾರ ಪತ್ತೆಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.