ADVERTISEMENT

ದಕ್ಷಿಣ ಕೊರಿಯಾ: ಮತ್ತಷ್ಟು ಉನ್ನತ ಅಧಿಕಾರಿಗಳ ವಿದೇಶ ಪ್ರವಾಸಕ್ಕೆ ನಿರ್ಬಂಧ

ಏಜೆನ್ಸೀಸ್
Published 10 ಡಿಸೆಂಬರ್ 2024, 13:12 IST
Last Updated 10 ಡಿಸೆಂಬರ್ 2024, 13:12 IST
-
-   

ಸೋಲ್(ದಕ್ಷಿಣ ಕೊರಿಯಾ): ವಿದೇಶಗಳಿಗೆ ಪ್ರವಾಸ ಕೈಗೊಳ್ಳದಂತೆ ದಕ್ಷಿಣ ಕೊರಿಯಾ ಸರ್ಕಾರ ಮತ್ತಷ್ಟು ಉನ್ನತ ಅಧಿಕಾರಿಗಳ ಮೇಲೆ ಮಂಗಳವಾರ ನಿಷೇಧ ಹೇರಿದೆ.

ಕೊರಿಯಾದ ನ್ಯಾಷನಲ್ ಪೊಲೀಸ್‌ ಏಜೆನ್ಸಿಯ ಪ್ರಧಾನ ಕಮಿಷನರ್ ಚೊ ಜಿ–ಹೊ ಹಾಗೂ ಇತರ ಇಬ್ಬರು ಉನ್ನತ ಪೊಲೀಸ್‌ ಅಧಿಕಾರಿಗಳ ವಿದೇಶ ಪ್ರಯಾಣದ ಮೇಲೆ  ನಿರ್ಬಂಧ ಹೇರಲಾಗಿದೆ.

ದೇಶದಲ್ಲಿ ಸೇನಾಡಳಿತ ಹೇರುವುದಕ್ಕೆ ಅಧ್ಯಕ್ಷ ಯೂನ್‌ ಸುಕ್ ಯೋಲ್‌ ನಡೆಸಿದ್ದ ಯತ್ನಗಳು ವಿಫಲಗೊಂಡಿದ್ದವು. ಈ ಬೆಳವಣಿಗೆ ನಂತರ, ಉನ್ನತ ಅಧಿಕಾರಿಗಳು ವಿದೇಶಗಳಿಗೆ ಭೇಟಿ ನೀಡುವುದನ್ನು ಸರ್ಕಾರ ನಿಷೇಧಿಸಿದೆ. 

ADVERTISEMENT

ಕಮಾಂಡರ್ ಜನರಲ್ ಪಾರ್ಕ್ ಅನ್–ಸು ಸೇರಿದಂತೆ ಹಲವು ಉನ್ನತ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅಲ್ಲದೇ, ಮಾಜಿ ರಕ್ಷಣಾ ಸಚಿವ ಹಾಗೂ ಇತರ ಮಂತ್ರಿಗಳು ವಿದೇಶ ಪ್ರವಾಸ ಕೈಗೊಳ್ಳದಂತೆ ಈಗಾಗಲೇ ನಿರ್ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.