ಯೂನ್ ಸುಕ್ ಯೋಲ್
ಸೋಲ್: ವಾಗ್ದಂಡನೆಗೆ ಗುರಿಯಾಗಿರುವ ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರನ್ನು ವಶಕ್ಕೆ ಪಡೆದು ಶುಕ್ರವಾರ ಮೂರು ದಿನ ಪೂರ್ಣಗೊಂಡ ಬೆನ್ನಲ್ಲೇ, ಅಧಿಕೃತ ಬಂಧನಕ್ಕಾಗಿ ನ್ಯಾಯಾಲಯದಿಂದ ವಾರಂಟ್ ಪಡೆಯಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ.
ತನಿಖೆಗೆ ಹಾಜರಾಗುವಂತೆ ಯೂಲ್ ಅವರಗೆ ಸಮನ್ಸ್ ನೀಡಿದ್ದರೂ ಪದೇ ಪದೇ ಗೈರಾಗುತ್ತಿದ್ದರು. ಬುಧವಾರ ವಶಕ್ಕೆ ಪಡೆದ ವಾರಂಟ್ ಅವಧಿಯು ಶುಕ್ರವಾರ ರಾತ್ರಿ 9.0ರವರೆಗೆ ಮಾನ್ಯವಾಗಿದೆ. ಅಧಿಕೃತ ಬಂಧನ ಸಂಬಂಧ ವಾರಂಟ್ ಪಡೆಯಲು ತನಿಖಾಧಿಕಾರಿಗಳು ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಬಂಧನಕ್ಕೆ ಅಧಿಕೃತ ಆದೇಶ ದೊರೆತರೆ, 20 ದಿನಗಳ ಕಾಲ ಅವರನ್ನು ವಶಕ್ಕೆ ಪಡೆಯಲು ಅವಕಾಶವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.