ADVERTISEMENT

ಗುರುತ್ವಬಲ ಕ್ಷಿಪಣಿ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ

​ಪ್ರಜಾವಾಣಿ ವಾರ್ತೆ
Published 6 ಜನವರಿ 2025, 11:29 IST
Last Updated 6 ಜನವರಿ 2025, 11:29 IST
ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್‌ ಉನ್
ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್‌ ಉನ್   

ಎಪಿ

ಸೋಲ್‌: ‘ಉತ್ತರ ಕೊರಿಯಾವು ಸೋಮವಾರ ಗುರುತ್ವಬಲ ಕ್ಷಿಪಣಿ ಪರೀಕ್ಷೆ ನಡೆಸಿದೆ. ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಕೆಲವೇ ವಾರಗಳ ಮೊದಲು ಈ ಪರೀಕ್ಷೆ ನಡೆಸಲಾಗಿದೆ’ ಎಂದು ದಕ್ಷಿಣ ಕೊರಿಯಾದ ಸೇನೆ ತಿಳಿಸಿದೆ.

ಜೊತೆಗೆ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟೊನಿ ಬ್ಲಿಂಕನ್‌ ಅವರು ಕೆಲವೇ ದಿನಗಳಲ್ಲಿ ಸೋಲ್‌ಗೆ ಭೇಟಿ ನೀಡಲಿದ್ದಾರೆ. ಉತ್ತರ ಕೊರಿಯಾ ಒಡ್ಡುತ್ತಿರುವ ಅಣು ಬೆದರಿಕೆ ಹಾಗೂ ಇತರ ವಿಷಯಗಳ ಚರ್ಚೆ ಸಂಬಂಧ ಬ್ಲಿಂಕನ್‌ ಅವರು ದಕ್ಷಿಣ ಕೊರಿಯಾಗೆ ಭೇಟಿ ನೀಡಲು ವೇಳಾಪಟ್ಟಿ ನಿಗದಿಯಾಗಿದೆ. ಇದಕ್ಕೂ ಮೊದಲೇ ಈ ಪರೀಕ್ಷೆ ನಡೆದಿದೆ.

ADVERTISEMENT

‘ಪ್ಯಾಂಗ್ಯಾಂಗ್‌ನಿಂದ ಕ್ಷಿಪಣಿಯನ್ನು ಹಾರಿಸಲಾಗಿದೆ. ಉತ್ತರ ಕೊರಿಯಾವು ಇಂಥ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ ಎಂಬ ಮಾಹಿತಿಯು ನಮಗೆ ಹಾಗೂ ಅಮೆರಿಕಕ್ಕೆ ಮೊದಲೇ ತಿಳಿದಿತ್ತು. ನಾವು ಇಂಥ ಪರೀಕ್ಷೆಯನ್ನು ಖಂಡಿಸುತ್ತೇವೆ’ ಎಂದು ದಕ್ಷಿಣ ಕೊರಿಯಾ ಸೇನೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.