ADVERTISEMENT

ಸ್ಪೇನ್, ಇರಾನ್‌ನಲ್ಲಿ ಕೋವಿಡ್-19ಗೆ ನೂರಕ್ಕೂ ಹೆಚ್ಚು ಜನರು ಬಲಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 15:46 IST
Last Updated 30 ಮಾರ್ಚ್ 2020, 15:46 IST
ಕೊರೊನಾ ವೈರಸ್
ಕೊರೊನಾ ವೈರಸ್   

ಮ್ಯಾಡ್ರಿಡ್: ಇರಾನ್‌ನಲ್ಲಿ ಕೋವಿಡ್-19 ಗೆ ಹೊಸದಾಗಿ 117 ಸಾವುಗಳು ವರದಿಯಾಗಿದ್ದು, ಸಾವಿನ ಸಂಖ್ಯೆ 2,757 ಕ್ಕೆ ಏರಿಕೆಯಾಗಿದೆ. ಈ ಮಧ್ಯೆ ಕಳೆದ 24 ಗಂಟೆಗಳಲ್ಲಿ ಸ್ಪೇನ್‌ನಲ್ಲಿ 812 ಜನರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 7,340ಕ್ಕೆ ತಲುಪಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಅಂತರ ಕುರಿತು ಮಾರ್ಗಸೂಚಿಗಳನ್ನು ಏಪ್ರಿಲ್ 30ರವರೆಗೆ ವಿಸ್ತರಿಸಿದ್ದಾರೆ.

ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಅಮೆರಿಕದಲ್ಲಿ 100,000ಕ್ಕೂ ಹೆಚ್ಚು ಜನರು ಸಾಯಬಹುದು ಎಂದು ಎಚ್ಚರಿಸಿದ್ದಾರೆ.

ADVERTISEMENT

ಕೊರೊನಾ ವೈರಸ್ ಸೋಂಕಿಗೆ ನ್ಯೂಯಾರ್ಕ್‌ನಲ್ಲಿ ಮೃತಪಟ್ಟವರ ಸಂಖ್ಯೆ 1,000 ದಾಟಿದ್ದರಿಂದ ಭಾನುವಾರ ಸಂಜೆ ಈ ಪ್ರಕಟಣೆ ಹೊರಡಿಸಲಾಗಿದೆ. ಆದರೆ ಆರಂಭಿಕ 15 ದಿನಗಳ ಅವಧಿ ಸೋಮವಾರ ಮುಗಿಯಬೇಕಿತ್ತು.

ಇತರ ದೇಶಗಳಿಗಿಂತ ಅಮೆರಿಕದಲ್ಲಿ ಕೊರೊನಾ ವೈರಸ್ ಸೋಂಕಿಗೆ ಅತಿಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಈ ಸಂಖ್ಯೆ 139,000 ಆಗಿದ್ದು, ಇದುವರೆಗೂ 2,400ಕ್ಕೂ ಹೆಚ್ಚು ಜನರು ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ.

ವಿಶ್ವದಾದ್ಯಂತ 718,000 ಜನರು ಸೋಂಕಿಗೆ ಒಳಗಾಗಿದ್ದಾರೆ. ಅವರಲ್ಲಿ 149,000 ಜನರು ಗುಣಮುಖರಾಗಿದ್ದಾರೆ. 33,000 ಜನರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.