ADVERTISEMENT

ಸ್ಪೇನ್‌ನಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಏರಿಕೆ

ಏಜೆನ್ಸೀಸ್
Published 11 ಜುಲೈ 2021, 6:36 IST
Last Updated 11 ಜುಲೈ 2021, 6:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮ್ಯಾಡ್ರಿಡ್‌:ಸ್ಪೇನ್‌ನಲ್ಲಿ ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರ ತಳಿಯು ವೇಗವಾಗಿ ಹರಡುತ್ತಿದೆ. ಬಾರ್ಸಿಲೋನಾದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗಿದ್ದು, ಆಸ್ಪತ್ರೆಗಳು ಸೋಂಕನ್ನು ಎದುರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ.

ಈ ತಳಿಯು ಲಸಿಕೆ ಪಡೆಯದ ಕಿರಿಯ ವಯಸ್ಕರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಈಗಾಗಲೇ ಹಲವು ಮಂದಿ ಆರೋಗ್ಯ ಕೇಂದ್ರಗಳು ಮತ್ತು ತುರ್ತು ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾರ್ಸಿಲೋನಾದ ಡೆಲ್‌ಮಾರ್‌ ಆಸ್ಪ‍ತ್ರೆಯಲ್ಲಿ ಎರಡು ವಾರಗಳೊಳಗೆ ಕೋವಿಡ್‌ ರೋಗಿಗಳ ಸಂಖ್ಯೆ 8ರಿಂದ 35ಕ್ಕೆ ಏರಿಕೆಯಾಗಿದೆ.

ADVERTISEMENT

‘ಒಂದು ವೇಳೆ ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಸೋಂಕು ಪ್ರಸರಣವನ್ನು ತಡೆಯಲು ಕಠಿಣ ನಿಯಮಗಳನ್ನು ಜಾರಿಗೊಳಿಸಬೇಕಾಗುತ್ತದೆ’ ಎಂದು ಬಾರ್ಸಿಲೋನಾದ ಕೋವಿಡ್‌ ಸಂಯೋಜಕ ಜುವಾನ್ ಪ್ಯಾಬ್ಲೊ ಹೊರ್ಕಜಾಡಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.