ADVERTISEMENT

ಸ್ಪೇನ್‌, ಪೋರ್ಚುಗಲ್‌ನಲ್ಲಿ ವಿದ್ಯುತ್‌ ಪೂರೈಕೆ ಸಹಜ ಸ್ಥಿತಿಗೆ

ಏಜೆನ್ಸೀಸ್
Published 29 ಏಪ್ರಿಲ್ 2025, 15:40 IST
Last Updated 29 ಏಪ್ರಿಲ್ 2025, 15:40 IST
<div class="paragraphs"><p>ವಿದ್ಯುತ್ ವ್ಯತ್ಯಯದಿಂದ ಸಂಚಾರಿ ದೀಪಗಳು ಕಾರ್ಯನಿರ್ವಹಿಸದ ಕಾರಣ ಸ್ಪೇನ್‌, ಫ್ರಾನ್ಸ್‌ನ ಗಡಿಭಾಗ ಐಬೇರಿಯನ್‌ ದ್ವೀಪದಲ್ಲಿ ರಸ್ತೆಯಲ್ಲಿ ನಿಂತ ವಾಹನಗಳು</p></div>

ವಿದ್ಯುತ್ ವ್ಯತ್ಯಯದಿಂದ ಸಂಚಾರಿ ದೀಪಗಳು ಕಾರ್ಯನಿರ್ವಹಿಸದ ಕಾರಣ ಸ್ಪೇನ್‌, ಫ್ರಾನ್ಸ್‌ನ ಗಡಿಭಾಗ ಐಬೇರಿಯನ್‌ ದ್ವೀಪದಲ್ಲಿ ರಸ್ತೆಯಲ್ಲಿ ನಿಂತ ವಾಹನಗಳು

   

ಬಾರ್ಸಿಲೋನಾ: ಹಠಾತ್‌ ವಿದ್ಯುತ್‌ ವ್ಯತ್ಯಯದಿಂದ ಸಂಪೂರ್ಣ ಕತ್ತಲಲ್ಲಿ ಮುಳುಗಿದ್ದ ಸ್ಪೇನ್‌ನಲ್ಲಿ ಮಂಗಳವಾರ ನಸುಕಿನಲ್ಲಿ ವಿದ್ಯುತ್‌ ಪೂರೈಕೆ ಮರುಸ್ಥಾಪನೆಗೊಂಡಿದ್ದು, ಜನಜೀವನವೂ ಸಹಜ ಸ್ಥಿತಿಗೆ ಮರಳಿದೆ. 

ವಿದ್ಯುತ್ ಸರಬರಾಜಿನಲ್ಲಿ ಉಂಟಾದ ಭಾರಿ ವ್ಯತ್ಯಯದಿಂದ ಸ್ಪೇನ್‌ ಹಾಗೂ ಪೋರ್ಚುಗಲ್‌ನಲ್ಲಿ
ಸೋಮವಾರ ಮೆಟ್ರೊ ರೈಲು ಸಂಪರ್ಕ, ಮೊಬೈಲ್‌ ಸಂಪರ್ಕ, ಬೀದಿ ದೀಪ, ಸಂಚಾರ ಸಿಗ್ನಲ್‌ ದೀಪ ಹಾಗೂ ಎಟಿಎಂ ವಹಿವಾಟುಗಳು ಸ್ಥಗಿತಗೊಂಡಿದ್ದವು.

ADVERTISEMENT

ಬೆಳಿಗ್ಗೆ 6.30ರ ಸುಮಾರಿಗೆ ಸ್ಪೇನ್‌ನಲ್ಲಿ ಶೇ 99ಕ್ಕಿಂತಲೂ ಹೆಚ್ಚು ಇಂಧನ ಪೂರೈಕೆ ಮರುಸ್ಥಾಪಿಸಲಾಗಿದೆ ಎಂದು ದೇಶದ ವಿದ್ಯುತ್ ನಿರ್ವಾಹಕ ರೆಡ್ ಎಲೆಕ್ಟ್ರಿಕಾ ತಿಳಿಸಿದೆ.

ಐಬೇರಿಯನ್‌ ದ್ವೀಪದಲ್ಲಿ ಸುಮಾರು 16 ತಾಸು ವಿದ್ಯುತ್ ಸಂಪರ್ಕ ಇಲ್ಲದೆ ದಿನ ಕಳೆದ ಜನರು ಮೊಬೈಲ್‌ ಸಂಪರ್ಕವೂ ಇಲ್ಲದಂತಾಗಿ, ತಮ್ಮ ಪ್ರೀತಿಪಾತ್ರರನ್ನು ಸಂಪರ್ಕಿಸಲು ಆಗದೆ ಪರಿತಪಿಸಿದ್ದರು.

ಇನ್ನೂ ಗೊತ್ತಾಗದ ಕಾರಣ: 

ಮಾರ್ಚ್ 20ರಂದು ಬೆಂಕಿ ಅವಘಡದಿಂದ, ಅತ್ಯಂತ ಹೆಚ್ಚು ಪ್ರಯಾಣಿಕ ದಟ್ಟಣೆಯ ಹೀಥ್ರೂ ವಿಮಾನ ನಿಲ್ದಾಣ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಇದಾದ ಕೆಲವೇ ತಿಂಗಳುಗಳಲ್ಲಿ ಇಂತಹದೇ ರೀತಿಯ ಗಂಭೀರ ಘಟನೆ ಯುರೋಪಿನಲ್ಲಿ ನಡೆದಿದೆ. ಹಠಾತ್‌ ವಿದ್ಯುತ್‌ ವ್ಯತ್ಯಯಕ್ಕೆ ಕಾರಣವೇನೆಂಬುದು ಇದುವರೆಗೆ ಗೊತ್ತಾಗಿಲ್ಲ. ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.