ADVERTISEMENT

ಶ್ರೀಲಂಕಾ: ಭಾರತ ಸೇರಿ ಏಳು ದೇಶಗಳ ಪ್ರಜೆಗಳಿಗೆ ಉಚಿತ ವೀಸಾ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 13:45 IST
Last Updated 28 ನವೆಂಬರ್ 2023, 13:45 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೊಲಂಬೊ: ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಭಾರತ ಸೇರಿದಂತೆ ಏಳು ದೇಶಗಳ ಪ್ರಜೆಗಳಿಗೆ ತತ್‌ಕ್ಷಣದಿಂದಲೇ ಉಚಿತ ವೀಸಾ ನೀಡುವುದಾಗಿ ಶ್ರೀಲಂಕಾದ ವಲಸೆ ಇಲಾಖೆ ಘೋಷಿಸಿದೆ.

ಭಾರತ, ಚೀನಾ, ರಷ್ಯಾ, ಜಪಾನ್‌, ಮಲೇಷ್ಯಾ, ಇಂಡೋನೇಷ್ಯಾ ಮತ್ತು ಥಾಯ್ಲೆಂಡ್‌ ಪ್ರಜೆಗಳಿಗೆ ಉಚಿತ ಪ್ರವಾಸಿ ವೀಸಾ ನೀಡಲು ಕಳೆದ ಅಕ್ಟೋಬರ್‌ನಲ್ಲಿ ಸಂಪುಟ ನಿರ್ಧಾರ ಕೈಗೊಂಡಿತ್ತು. ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವ ದೇಶದ ಪ್ರವಾಸೋದ್ಯಮ ಕ್ಷೇತ್ರವನ್ನು ಪುನಶ್ಚೇತನಗೊಳಿಸುವ ಸಲುವಾಗಿ ಈ ಘೋಷಣೆ ಮಾಡಲಾಗಿತ್ತು.

ADVERTISEMENT

ಪ್ರಾಯೋಗಿಕವಾಗಿ ಈ ಯೋಜನೆಯು 2024ರ ಮಾರ್ಚ್‌ 31ರವರೆಗೆ ಜಾರಿಯಲ್ಲಿರಲಿದೆ. ಈ ವೀಸಾ ಪಡೆದ ಪ್ರವಾಸಿಗರು 30 ದಿನಗಳ ಕಾಲ ದೇಶದಲ್ಲಿ ನೆಲೆಸಬಹುದು.

2019ರಲ್ಲಿ ಈಸ್ಟರ್ ಸಂಡೆ ಬಾಂಬ್‌ ದಾಳಿ ನಡೆದ ನಂತರ ದೇಶದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.