ಕೊಲಂಬೊ: ಗೊಟಬಯ ರಾಜಪಕ್ಸ ಅವರ ರಾಜೀನಾಮೆ ಪತ್ರವನ್ನು ಸ್ವೀಕರಿಸಲಾಗಿದೆ ಎಂದು ಶ್ರೀಲಂಕಾ ಸಂಸತ್ತಿನ ಸ್ವೀಕರ್ ಕಚೇರಿ ದೃಢಪಡಿಸಿದೆ.
‘ಶ್ರೀಲಂಕಾದಲ್ಲಿರುವ ಸಿಂಗಾಪುರ ರಾಯಭಾರ ಕಚೇರಿಯ ಮೂಲಕ ಅಧ್ಯಕ್ಷ ರಾಜಪಕ್ಸ ಅವರ ರಾಜೀನಾಮೆ ಪತ್ರವನ್ನು ಸ್ಪೀಕರ್ ಸ್ವೀಕರಿಸಿದ್ದಾರೆ. ಪತ್ರದಲ್ಲಿನ ಮಾಹಿತಿಯನ್ನು ಮರುಪರಿಶೀಲಿಸಲಾಗುವುದು. ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ, ಈ ಸಂಬಂಧ ಅಧಿಕೃತ ಪ್ರಕಟಣೆಯನ್ನು ನಾಳೆ ಪ್ರಕಟಿಸಲಾಗುವುದು’ ಎಂದು ಸ್ವೀಕರ್ ಕಚೇರಿ ಪತ್ರಿಕಾ ಹೇಳಿಕೆ ನೀಡಿದೆ.
ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದ್ದ ರಾಜಪಕ್ಸ ಶ್ರೀಲಂಕಾದಿಂದ ಪರಾರಿಯಾಗಿ ಮಾಲ್ಡೀವ್‌ನಲ್ಲಿ ತಂಗಿದ್ದರು. ಮಾಲ್ಡೀವ್‌ನಲ್ಲಿಯೂ ಪ್ರತಿಭಟನೆಯನ್ನು ಎದುರಿಸಿದ ಅವರು ಈಗ ಸಿಂಗಾಪುರಕ್ಕೆ ಹಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.