ADVERTISEMENT

ಸಂಸತ್ ಸದಸ್ಯ ಸ್ಥಾನಕ್ಕೆ ಶ್ರೀಲಂಕಾ ಅಧ್ಯಕ್ಷರ ಸಹೋದರ ಬಾಸಿಲ್ ರಾಜಪಕ್ಸ ರಾಜೀನಾಮೆ

ಪಿಟಿಐ
Published 9 ಜೂನ್ 2022, 7:03 IST
Last Updated 9 ಜೂನ್ 2022, 7:03 IST
 ಬಾಸಿಲ್ ರಾಜಪಕ್ಸ
ಬಾಸಿಲ್ ರಾಜಪಕ್ಸ    

ಕೊಲಂಬೊ: ಶ್ರೀಲಂಕಾದ ಮಾಜಿ ಹಣಕಾಸು ಸಚಿವ ಹಾಗೂ ಪ್ರಸ್ತುತ ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಸಹೋದರ ಬಾಸಿಲ್ ರಾಜಪಕ್ಸ ಅವರು ಸಂಸತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಶ್ರೀಲಂಕಾದ ಮಹಾ ಆರ್ಥಿಕ ಬಿಕ್ಕಟ್ಟಿನ ನಂತರ ಪ್ರಭಾವಿ ರಾಜಕೀಯ ಮನೆತನದ ಎರಡನೇ ನಾಯಕರು ಈ ನಿರ್ಧಾರ ಕೈಗೊಂಡಿದ್ದಾರೆ.

'ಇಂದಿನಿಂದ ನಾನು ಸರ್ಕಾರದ ಯಾವುದೇ ಕಾರ್ಯ ಕಲಾಪಗಳಲ್ಲಿ ಭಾಗಿಯಾಗುವುದಿಲ್ಲ. ಆದರೆ, ನಾನು ರಾಜಕೀಯದಿಂದ ನಿರ್ಗಮಿಸುವುದಿಲ್ಲ' ಎಂದು ಬಾಸಿಲ್ ರಾಜಪಕ್ಸ ತಿಳಿಸಿದ್ದಾರೆ.

ADVERTISEMENT

ಗೊಟಬಯರಾಜಪಕ್ಸ ಅವರ ಹಿರಿಯ ಸಹೋದರರೂ ಆಗಿರುವ ಮಹಿಂದಾ ರಾಜಪಕ್ಸ ಅವರು ವ್ಯಾಪಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಳೆದ ತಿಂಗಳು ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಭೂಗತರಾಗಿದ್ದರು. ಆದರೆ, ಮಹಿಂದಾ ಅವರು ಇನ್ನೂ ಕೂಡ ಸಂಸತ್‌ ಸದಸ್ಯರಾಗಿ ಉಳಿದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.