ADVERTISEMENT

ಶ್ರೀಲಂಕಾ: ಆಗಸ್ಟ್ 5ಕ್ಕೆ ಸಂಸತ್ ಚುನಾವಣೆ

ಪಿಟಿಐ
Published 10 ಜೂನ್ 2020, 13:27 IST
Last Updated 10 ಜೂನ್ 2020, 13:27 IST
ಗೊಟಬಯಾ ರಾಜಪಕ್ಸೆ
ಗೊಟಬಯಾ ರಾಜಪಕ್ಸೆ   

ಕೊಲಂಬೊ: ಕೋವಿಡ್‌–19 ಕಾರಣಕ್ಕಾಗಿ ಎರಡು ಬಾರಿ ಮುಂದೂಡಲಾಗಿದ್ದ ಶ್ರೀಲಂಕಾದ ಸಂಸತ್ ಚುನಾವಣೆ ಆಗಸ್ಟ್‌ 5ರಂದು ನಡೆಯಲಿದೆ ಎಂದು ಶ್ರೀಲಂಕಾದ ರಾಷ್ಟ್ರೀಯ ಚುನಾವಣಾ ಆಯೋಗದ ಅಧ್ಯಕ್ಷ ಮಹಿಂದಾ ದೇಶಪ್ರಿಯ ಬುಧವಾರ ಹೇಳಿದ್ದಾರೆ.

ಆಯೋಗದ ಸದಸ್ಯರ ಸಭೆಯಲ್ಲಿ ಆಗಸ್ಟ್ 5ರಂದು ಚುನಾವಣೆ ನಡೆಸುವ ಕುರಿತು ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ದೇಶಪ್ರಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಶ್ರೀಲಂಕಾದ ಅಧ್ಯಕ್ಷ ಗೊಟಬಯಾ ರಾಜಪಕ್ಸೆ ಅವರು ಪ್ರತಿಪಕ್ಷ ನಿಯಂತ್ರಿತ ಸಂಸತ್ತನ್ನು ಮಾರ್ಚ್ 2ರಂದು ವಿಸರ್ಜಿಸಿದ್ದರು. ನಿಗದಿತ ಸಮಯಕ್ಕಿಂತ ಆರು ತಿಂಗಳು ಮುನ್ನವೇ 225 ಹೊಸ ಸದಸ್ಯರ ಆಯ್ಕೆಗೆ ಏಪ್ರಿಲ್ 25ರಂದು ಕ್ಷಿಪ್ರ ಚುನಾವಣೆಗೆ ಕರೆಕೊಟ್ಟಿದ್ದರು.

ADVERTISEMENT

ಆದರೆ, ಈ ನಡುವೆ ಲಂಕಾದಲ್ಲಿ 889 ಮಂದಿಗೆ ಕೊರೊನಾ ಸೋಂಕು ತಗುಲಿ, 9 ಮಂದಿ ಸಾವಿಗೀಡಾಗಿದ್ದರಿಂದ ಚುನಾವಣಾ ಆಯೋಗವು, ಜೂನ್ 20ಕ್ಕೆ ಚುನಾವಣೆಯನ್ನು ಮುಂದೂಡಿತ್ತು. ಆದರೆ, ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಿದ್ದರಿಂದ ಜೂನ್ 20ರಂದು ಮತದಾನ ನಡೆಸಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.