ADVERTISEMENT

ರಾಜಪಕ್ಸ ಸಹೋದರರ ವಿದೇಶ ಪ್ರಯಾಣ ನಿರ್ಬಂಧ ವಿಸ್ತರಿಸಿದ ‘ಸುಪ್ರೀಂ’

ಪಿಟಿಐ
Published 1 ಆಗಸ್ಟ್ 2022, 16:52 IST
Last Updated 1 ಆಗಸ್ಟ್ 2022, 16:52 IST

ಕೊಲಂಬೊ: ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಮತ್ತು ಅವರ ತಮ್ಮ, ಮಾಜಿ ಹಣಕಾಸು ಸಚಿವ ಬಾಸಿಲ್‌ ರಾಜಪಕ್ಸ ಅವರನ್ನು ವಿದೇಶ ಪ್ರಯಾಣದ ಮೇಲಿನ ನಿರ್ಬಂಧವನ್ನು ಆಗಸ್ಟ್‌ 4ರ ವರೆಗೆ ಸುಪ್ರೀಂ ಕೋರ್ಟ್‌ ಸೋಮವಾರ ವಿಸ್ತರಿಸಿದೆ.

ದೇಶದ ಸದ್ಯದ ಆರ್ಥಿಕ ಬಿಕ್ಕಟಿಗೆ ಕಾರಣರಾದ ಮಹಿಂದಾ ಹಾಗೂ ಬಾಸಿಲ್‌ ಅವರ ವಿರುದ್ಧ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ಮುಖ್ಯ ನ್ಯಾಯಮೂರ್ತಿ ಜಯಂತ ಜಯಸೂರ್ಯ ಅವರ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ಈ ನಿರ್ದೇಶನ ನೀಡಿದೆ.

ಮಹಿಂದಾ, ಬಾಸಿಲ್‌ ಮತ್ತು ಕೇಂದ್ರೀಯ ಬ್ಯಾಂಕ್‌ನ ಮಾಜಿ ಗವರ್ನರ್‌ ಆಜಿತ್ ನಿವೆರ್ದ್‌ ಕಬ್ರಾಲ್‌ ಅವರು ಜುಲೈ 28ರ ವರೆಗೆ ವಿದೇಶ ಪ್ರಯಾಣ ಮಾಡದಂತೆ ಸುಪ್ರೀಂ ಕೋರ್ಟ್‌ ನಿರ್ಬಂಧ ಹೇರಿತ್ತು. ನಂತರ ಇದನ್ನು ಆಗಸ್ಟ್‌ 2ರ ವರೆಗೆ ವಿಸ್ತರಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.