ADVERTISEMENT

ಅಮೆರಿಕ: ಗಣೇಶ ಬೀದಿ ನಾಮಕರಣ

ಪಿಟಿಐ
Published 4 ಏಪ್ರಿಲ್ 2022, 10:41 IST
Last Updated 4 ಏಪ್ರಿಲ್ 2022, 10:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನ್ಯೂಯಾರ್ಕ್(ಪಿಟಿಐ): ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕದಲ್ಲಿರುವ ಬೀದಿಯೊಂದಕ್ಕೆ 'ಗಣೇಶ ದೇವಸ್ಥಾನ ಬೀದಿ' ಎಂಬ ನಾಮಕಾರಣ ಮಾಡಲಾಗಿದ್ದು, ಇದು ಅಮೆರಿಕದಲ್ಲಿರುವ ಭಾರತೀಯ ಸಮುದಾಯಕ್ಕೆ ಸಂತಸದ ವಿಷಯವಾಗಿದೆ.

ಶ್ರೀ ಮಹಾವಲ್ಲಭ ಗಣಪತಿ ದೇವಸ್ಥಾನವನ್ನು 1977ರಲ್ಲಿ ನಿರ್ಮಾಣ ಮಾಡಲಾಗಿತ್ತು. ಇದು ಉತ್ತರ ಅಮೆರಿಕದಲ್ಲಿರುವ ಅತಿ ಹಳೆಯ ಮತ್ತು ಏಕೈಕ ಗಣೇಶ ದೇಗುಲ. ಕ್ವೀನ್ಸ್ ಕೌಂಟಿಯ ಫ್ಲಷಿಂಗ್ ಎಂಬ ಪ್ರದೇಶದಲ್ಲಿ ಈ ದೇವಸ್ಥಾನವಿದ್ದು, ಈ ಬೀದಿಗೆ ಈಗ ಗಣೇಶ ದೇವಸ್ಥಾನ ಬೀದಿ ಎಂದು ಹೆಸರಿಡಲಾಗಿದೆ. ಇದಕ್ಕೂ ಮುನ್ನ ಧಾರ್ಮಿಕ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಗುಲಾಮಗಿರಿ ವಿರುದ್ಧದ ಚಳವಳಿಗಾರ ಜಾನ್ ಬೌನೆ ಅವರ ಹೆಸರನ್ನು ಈ ಬೀದಿಗೆ ಇಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT