ADVERTISEMENT

ಜಾವಾದಲ್ಲಿ ಭೂಕಂಪನ: ಭಯದಿಂದ ಮನೆಯಿಂದ ಹೊರಬಂದ ಜನ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 13:56 IST
Last Updated 3 ಡಿಸೆಂಬರ್ 2022, 13:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಕಾರ್ತ (ಎಪಿ): ಇಂಡೊನೇಷ್ಯಾದ ಜಾವಾ ದ್ವೀಪದ ಪ್ರಮುಖ ಪ್ರದೇಶಗಳಲ್ಲಿ ಶನಿವಾರ ಭೂಮಿ ಕಂಪಿಸಿದ್ದು, ಜನರು ಭಯಭೀತರಾಗಿ ಮನೆಯಿಂದ ಹೊರಬಂದಿದ್ದಾರೆ. ತಕ್ಷಣದ ಮಾಹಿತಿಯ ಪ್ರಕಾರ ಯಾವುದೇ ಅವಘಡ ಸಂಭವಿಸಿಲ್ಲ. ಜೊತೆಗೆ ಸುನಾಮಿಯ ಅಪಾಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪನದ ತೀವ್ರತೆ 5.7 ರಷ್ಟು ದಾಖಲಾಗಿದ್ದು, ‌ಪಶ್ಚಿಮ ಜಾವಾ ಮತ್ತು ಕೇಂದ್ರ ಜಾವಾ ಪ್ರಾಂತ್ಯದ ಮಧ್ಯದಲ್ಲಿರುವ ಬಂಜಾರದಿಂದ 18 ಕಿ.ಮೀ ದೂರದಲ್ಲಿ, 112 ಕಿ.ಮೀ ಆಳದಲ್ಲಿ ಭೂಕಂಪನ ಕೇಂದ್ರಬಿಂದು ಪತ್ತೆಯಾಗಿದೆ.

ನವೆಂಬರ್‌ 21ರಂದುಸಿಯಾಂಜೂರ್‌ನಲ್ಲಿ 5.6 ತೀವ್ರತೆ ಭೂಕಂಪನ ಸಂಭವಿಸಿತ್ತು. ಆಗ 300 ಮಂದಿ ಮೃತಪಟ್ಟು, 600 ಮಂದಿ ಗಾಯಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.