ADVERTISEMENT

ಕಾಬೂಲ್‌ನಲ್ಲಿ ಆತ್ಮಾಹುತಿ ಬಾಂಬ್‌ ಸ್ಫೋಟ: 20ಕ್ಕೂ ಅಧಿಕ ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 13:39 IST
Last Updated 11 ಜನವರಿ 2023, 13:39 IST
ಅಫ್ಗಾನಿಸ್ತಾನದ ವಿದೇಶಾಂಗ ಸಚಿವಾಲಯದ ಬಳಿ ಬುಧವಾರ ಆತ್ಮಹತ್ಯಾ ಬಾಂಬ್ ಸ್ಫೋಟಗೊಂಡ ಸ್ಥಳವನ್ನು ತಾಲಿಬಾನ್ ಭದ್ರತಾ ಪಡೆ ಪರಿಶೀಲಿಸಿತು. – ಎಎಫ್‌ಪಿ ಚಿತ್ರ
ಅಫ್ಗಾನಿಸ್ತಾನದ ವಿದೇಶಾಂಗ ಸಚಿವಾಲಯದ ಬಳಿ ಬುಧವಾರ ಆತ್ಮಹತ್ಯಾ ಬಾಂಬ್ ಸ್ಫೋಟಗೊಂಡ ಸ್ಥಳವನ್ನು ತಾಲಿಬಾನ್ ಭದ್ರತಾ ಪಡೆ ಪರಿಶೀಲಿಸಿತು. – ಎಎಫ್‌ಪಿ ಚಿತ್ರ   

ಕಾಬೂಲ್‌: ಇಲ್ಲಿನ ವಿದೇಶಾಂಗ ಸಚಿವಾಲಯ ಕಚೇರಿ ಬಳಿ ಬುಧವಾರ ಆತ್ಮಾಹುತಿ ಬಾಂಬ್‌ ದಾಳಿ ನಡೆದಿದ್ದು, 20ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

‘ಸಚಿವಾಲಯ ಕಟ್ಟಡದ ಹೊರಗೆ ರಸ್ತೆಯಲ್ಲಿ ಜನ ಮಲಗಿರುವ ದೃಶ್ಯಗಳು ಕಂಡುಬರುತ್ತಿದ್ದು, ಇದರಲ್ಲಿ ಎಷ್ಟು ಜನ ಜೀವಂತವಾಗಿದ್ದಾರೆ ಎಂದು ತಿಳಿದಿಲ್ಲ. ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದನ್ನು ನಾನು ನೋಡಿದ್ದೇನೆ’ ಎಂದು ಎಎಫ್‌ಪಿ ಸುದ್ದಿಸಂಸ್ಥೆಯ ಚಾಲಕ ಜಮೈಡ್ ಕರಿಮಿ ಹೇಳಿದ್ದಾರೆ.

ತನ್ನ ಆಡಳಿತದಲ್ಲಿ ಭದ್ರತಾ ವ್ಯವಸ್ಥೆ ಸುಧಾರಿಸಿದೆ ಎಂದು ತಾಲಿಬಾನ್‌ ಹೇಳಿಕೊಂಡಿದ್ದರೂ, ಈಚಿನ ದಿನಗಳಲ್ಲಿ ಸ್ಫೋಟಗಳು ಮತ್ತು ದಾಳಿಗಳು ಹೆಚ್ಚಿವೆ. ಇಸ್ಲಾಮಿಕ್‌ ಸ್ಟೇಟ್‌ನ ಸ್ಥಳೀಯ ಘಟಕದಿಂದ ಇಂತಹ ದುಷ್ಕೃತ್ಯಗಳು ನಡೆಯುತ್ತಿವೆ ಎಂದು ಹೇಳಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.