ADVERTISEMENT

ತನಿಖೆಗೆ ಆದೇಶಿಸಿದ ಬೆನ್ನಲ್ಲೇ ಪತ್ನಿಯ ಷೇರು ಘೋಷಿಸಿದ ಸುನಕ್‌

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2023, 23:00 IST
Last Updated 19 ಏಪ್ರಿಲ್ 2023, 23:00 IST
   

ಲಂಡನ್: ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ವಿರುದ್ಧ ಕೇಳಿ ಬಂದಿರುವ ಸ್ವಹಿತಾಸಕ್ತಿಯ ಆರೋಪದ ಬಗ್ಗೆ ತನಿಖೆ ಆರಂಭವಾದ ಬೆನ್ನಲ್ಲೇ ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರ ಹೆಸರಿನಲ್ಲಿರುವ ಷೇರುಗಳು ಮತ್ತು ಉದ್ಯಮಗಳ ವಿವರ ಬಹಿರಂಗಪಡಿಸಿದ್ದಾರೆ.

‘ಸಂಗಾತಿಯ ಪಾಲುದಾರಿಕೆ ಅಥವಾ ನಿಕಟ ಕುಟುಂಬ ಸದಸ್ಯರ ಸಂಬಂಧಿತ ಆಸಕ್ತಿಗಳು’ ಎಂಬ ಶೀರ್ಷಿಕೆಯಡಿ ಆನ್‌ಲೈನ್‌ನಲ್ಲಿ ಕ್ಯಾಬಿನೆಟ್‌ ಕಚೇರಿ ಪ್ರಕಟಿಸಿರುವ ‘ಮಿನಿಸ್ಟರ್‌ ಆಸಕ್ತಿಗಳು’ ಪಟ್ಟಿಯಲ್ಲಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಅವರು ವೆಂಚರ್‌ ಕ್ಯಾಪಿಟಲ್‌ ಇನ್ವೆಸ್ಟರ್‌ ಆಗಿದ್ದಾರೆ. ಅವರು ವೆಂಚರ್‌ ಕ್ಯಾಪಿಟಲ್‌ ಇನ್ವೆಸ್ಟರ್‌ ಕಂಪನಿ ಕ್ಯಾಟಮರನ್ ವೆಂಚರ್ಸ್ ಯುಕೆ ಲಿಮಿಟೆಡ್ ಮಾಲೀಕತ್ವವನ್ನು ಹೊಂದಿದ್ದಾರೆ. ಹಲವಾರು ನೇರ ಷೇರುಗಳನ್ನು ಹೊಂದಿದ್ದಾರೆ’ ಎಂಬ ಮಾಹಿತಿ ಇದೆ.

ಅಕ್ಷತಾ ಮೂರ್ತಿ ಅವರು ಉಲ್ಲೇಖಿತ ಕೊರು ಕಿಡ್ಸ್ ಸಂಸ್ಥೆಯ ಷೇರುದಾರರು. ಈ ಸಂಸ್ಥೆಯು ಒಳಗೊಂಡಂತೆ ಇಂಗ್ಲೆಡ್‌ನ ಒಟ್ಟು ಆರು ಏಜೆನ್ಸಿಗಳ ಹೆಸರು, ವಿವರಗಳನ್ನು ಸರ್ಕಾರಿ ವೆಬ್‌ನಲ್ಲಿ ಪ್ರಕಟಿಸಲಾಗಿತ್ತು.

ADVERTISEMENT

ಬಿಬಿಸಿ ವರದಿಯ ಪ್ರಕಾರ, ರಿಷಿ ಸುನಕ್‌ ಅವರ ಪತ್ನಿ ಅಕ್ಷತಾ ಮೂರ್ತಿ ಷೇರು ಹೊಂದಿರುವ ಚೈಲ್ಡ್‌ಕೇರ್‌ ಏಜೆನ್ಸಿಗೆ ನೆರವಾಗುವ ಉದ್ದೇಶವು ಸುನಕ್‌ ಅವರು ಕಳೆದ ತಿಂಗಳು ಪ್ರಕಟಿಸಿದ ಬಜೆಟ್‌ನಲ್ಲಿ ಇದೆ. ಬಜೆಟ್‌ನಲ್ಲಿ ಪ್ರಕಟಿಸಿದ ನೂತನ ಯೋಜನೆಯ ಲಾಭ ಈ ಸಂಸ್ಥೆಗೆ ಲಭಿಸಲಿದೆ ಎಂದು ಆರೋಪಿಸಲಾಗಿತ್ತು. ಬ್ರಿಟನ್‌ನ ಸಂಸದೀಯ ಸನ್ನಡತೆ ಆಯೋಗದ ಆಯುಕ್ತರು ಈ ಕುರಿತ ತನಿಖೆಗೆ ಆದೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.