ADVERTISEMENT

ಮೇ 26ಕ್ಕೆ ‘ಸೂಪರ್‌ಮೂನ್‌’ ದರ್ಶನ

​ಪ್ರಜಾವಾಣಿ ವಾರ್ತೆ
Published 22 ಮೇ 2021, 11:30 IST
Last Updated 22 ಮೇ 2021, 11:30 IST
   

ಡೆಟ್ರಾಯಿಟ್‌ (ಅಮೆರಿಕ): ಪ್ರಸಕ್ತ ವರ್ಷದ ಮೊದಲ ಚಂದ್ರಗ್ರಹಣ ಮೇ 26ರಂದು ಸಂಭವಿಸಲಿದೆ. ಈ ಬಾರಿ ಇದು ವಿಶೇಷವಾಗಿರಲಿದ್ದು ಅಂದು ’ಸೂಪರ್‌ಮೂನ್‌’ ಗೋಚರವಾಗಲಿದೆ. ಚಂದ್ರ ಗ್ರಹಣ ಮತ್ತು ಕೆಂಪು ಚಂದ್ರನನ್ನು ಏಕಕಾಲಕ್ಕೆ ಕಾಣಬಹುದಾಗಿದೆ.

ಅಂದು ಚಂದ್ರ ಭೂಮಿಯಿಂದ ಅತೀ ಸಮೀಪದಲ್ಲಿ ಗೋಚರಿಸಲಿದ್ದಾನೆ. ಹೀಗಾಗಿ, ಚಂದ್ರ ಸಾಮಾನ್ಯಕ್ಕಿಂತಲೂ ಹೆಚ್ಚು ದೊಡ್ಡದಾಗಿ ಕಾಣಿಸುತ್ತಾನೆ.

ಚಂದ್ರನನ್ನು ಭೂಮಿಯ ನೆರಳು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತದೆ. ಆದರೆ, ಇದು ಸಂಪೂರ್ಣವಾಗಿ ಕಪ್ಪಗಾಗುವುದಿಲ್ಲ. ಬದಲಾಗಿ, ಕೆಂಪು ಬಣ್ಣ ಕಾಣಿಸಿಕೊಳ್ಳುತ್ತದೆ. ಆದ್ದರಿಂದ, ಸಂಪೂರ್ಣ ಚಂದ್ರ ಗ್ರಹಣವನ್ನು ಕೆಂಪು ಅಥವಾ ರಕ್ತ ಚಂದ್ರ ಎಂದು ಕರೆಯಲಾಗುತ್ತದೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

ADVERTISEMENT

ಮೇ 26ರಂದು ಆಸ್ಟ್ರೇಲಿಯಾ, ಜಪಾನ್‌, ಅಮೆರಿಕ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ‘ಸೂಪರ್‌ಮೂನ್‌’ ದರ್ಶನವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.