ADVERTISEMENT

ಬಾಂಗ್ಲಾದೇಶ: ಬಿಎನ್‌ಪಿ ಬೆಂಬಲಿಗರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2024, 15:42 IST
Last Updated 11 ಡಿಸೆಂಬರ್ 2024, 15:42 IST
<div class="paragraphs"><p>ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿ(ಬಿಎನ್‌ಪಿ) ಬೆಂಬಲಿಗರು ಭಾರತ ವಿರುದ್ಧ ರ‍್ಯಾಲಿ ಹಮ್ಮಿಕೊಂಡಿದ್ದರಿಂದ ಗಡಿಯಲ್ಲಿನ ಇಂಟಿಗ್ರೇಟೆಡ್‌ ಚೆಕ್‌ ಪೋಸ್ಟ್‌ನಲ್ಲಿ ಬಾಂಗ್ಲಾದೇಶದ ಭದ್ರತಾ ಸಿಬ್ಬಂದಿ ಬುಧವಾರ ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದರು </p></div>

ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿ(ಬಿಎನ್‌ಪಿ) ಬೆಂಬಲಿಗರು ಭಾರತ ವಿರುದ್ಧ ರ‍್ಯಾಲಿ ಹಮ್ಮಿಕೊಂಡಿದ್ದರಿಂದ ಗಡಿಯಲ್ಲಿನ ಇಂಟಿಗ್ರೇಟೆಡ್‌ ಚೆಕ್‌ ಪೋಸ್ಟ್‌ನಲ್ಲಿ ಬಾಂಗ್ಲಾದೇಶದ ಭದ್ರತಾ ಸಿಬ್ಬಂದಿ ಬುಧವಾರ ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದರು

   

–ಪಿಟಿಐ ಚಿತ್ರ 

ಢಾಕಾ: ಭಾರತದಲ್ಲಿನ ಬಾಂಗ್ಲಾದೇಶ ಹೈಕಮಿಷನ್‌ ಕಚೇರಿ ಮೇಲಿನ ದಾಳಿ ಖಂಡಿಸಿ ಹಾಗೂ ದೇಶದ ಬಾವುಟಕ್ಕೆ ಅವಮಾನಿಸಲಾಗಿದೆ ಎಂದು ಆರೋಪಿಸಿ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿ (ಬಿಎನ್‌ಪಿ)ಯ ಸಾವಿರಾರು ಕಾರ್ಯಕರ್ತರು, ಬೆಂಬಲಿಗರು ಕಾರುಗಳಲ್ಲಿ ಸಾಗಿ ಬುಧವಾರ ಪ್ರತಿಭಟಿಸಿದರು.

ADVERTISEMENT

ಮಾಜಿ ಪ್ರಧಾನಿ ಖಲೀದಾ ಜಿಯಾ ನೇತೃತ್ವದ ಬಿಎನ್‌ಪಿಯ ಕಾರ್ಯಕರ್ತರು, ಬೆಂಬಲಿಗರು ರಾಜಧಾನಿ ಢಾಕಾದಿಂದ, ಭಾರತಕ್ಕೆ ಹೊಂದಿಕೊಂಡಿರುವ ದೇಶದ ಪೂರ್ವ ಗಡಿಯ ಅಖೌರಾ ಬಳಿಯ ಇಂಟಿಗ್ರೇಟೆಡ್‌ ಚೆಕ್‌ ಪೋಸ್ಟ್‌(ಐಪಿಸಿ) ವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದರು.

ದಾರಿ ಮಧ್ಯೆ, ಪ್ರತಿಭಟನಕಾರರನ್ನು ಸ್ವಾಗತಿಸಿದ ಜಿಯಾ ಅವರ ಬೆಂಬಲಿಗರು, ಕೆಲ ದೂರದ ವರೆಗೆ ರ‍್ಯಾಲಿಯೊಂದಿಗೆ ಸಾಗಿ, ಭಾರತದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.