ಅಲ್ಬುಕರ್ಕ್ (ಅಮೆರಿಕ): ಶುಕ್ರವಾರ ಮುಂಜಾನೆ ನ್ಯೂ ಮೆಕ್ಸಿಕೊ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಮತ್ತೊಬ್ಬರು ಗಾಯಗೊಂಡಿದ್ದಾರೆ. ದಾಳಿ ಕಾರಣದಿಂದ ನೂರಾರು ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿ, ಕ್ಯಾಂಪಸ್‌ನಾದ್ಯಂತ ಶೋಧ ನಡೆಸಿ ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ.
ತನಿಖೆ ಇನ್ನೂ ನಡೆಯುತ್ತಿದ್ದು, ಅಲ್ಬುಕರ್ಕಿಯ ಮುಖ್ಯ ಕ್ಯಾಂಪಸ್ ಮುಚ್ಚಿರುತ್ತದೆ ಎಂದು ಶುಕ್ರವಾರ ಮಧ್ಯಾಹ್ನದ ನಂತರ ವಿಶ್ವವಿದ್ಯಾಲಯದ ಅಧಿಕಾರಿಗಳು ಹೇಳಿದ್ದಾರೆ. ಅಪರಾಧ ನಡೆದ ಸ್ಥಳವನ್ನು ಹೊರತುಪಡಿಸಿ, ಊಟದ ಹಾಲ್ ಮತ್ತು ಹಾಸ್ಟೆಲ್‌ಗೆ ತೆರಳಲು ಅನುಮತಿಯಿದೆ ಎಂದು ಅವರು ಹೇಳಿದ್ದಾರೆ.
ಶಂಕಿತನನ್ನು ವಶಕ್ಕೆ ಪಡೆದಿರುವ ಬಗ್ಗೆ ಮೇಯರ್ ಟಿಮ್ ಕೆಲ್ಲರ್ ಶುಕ್ರವಾರ ಸಂಜೆ ಘೋಷಿಸಿದ್ದಾರೆ. ಅದಾಗ್ಯೂ, ಆರೋಪಿಯ ಬಗ್ಗೆಯಾಗಲಿ, ಅವರನ್ನು ಎಲ್ಲಿ ಮತ್ತು ಯಾವಾಗ ವಶಕ್ಕೆ ಪಡೆಯಲಾಯಿತು ಎಂಬ ಬಗ್ಗೆಯಾಗಲಿ ಅವರು ಯಾವುದೇ ಮಾಹಿತಿಯನ್ನು ನೀಡಿಲ್ಲ.
ಗುಂಡೇಟಿಗೊಳಗಾದವರು ವಿದ್ಯಾರ್ಥಿಗಳಲ್ಲ ಎಂದು ವಿಶ್ವವಿದ್ಯಾಲಯದ ಪೊಲೀಸ್ ಇಲಾಖೆಯ ಲೆಫ್ಟಿನೆಂಟ್ ಹೇಳಿದ್ದಾರೆ. ಅವರು ವಿದ್ಯಾರ್ಥಿಗಳನ್ನು ಭೇಟಿಯಾಗಲು ಹಾಸ್ಟೆಲ್‌ನೊಳಗೆ ಹೋಗಿದ್ದರು ಎಂದು ಅವರು ತಿಳಿಸಿದ್ದಾರೆ. ಗುಂಡು ಹಾರಿಸಲ್ಪಟ್ಟವರ ಬಗ್ಗೆ ಅಧಿಕಾರಿಗಳು ಇನ್ನೂ ಯಾವುದೇ ಇತರ ವಿವರಗಳನ್ನು ಬಿಡುಗಡೆ ಮಾಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.