ADVERTISEMENT

ಬುರ್ಕಿನಾ ಫಾಸೊದಲ್ಲಿ ಬಾಂಬ್‌ ದಾಳಿ: 35 ಮಂದಿ ಸಾವು

ಏಜೆನ್ಸೀಸ್
Published 6 ಸೆಪ್ಟೆಂಬರ್ 2022, 14:20 IST
Last Updated 6 ಸೆಪ್ಟೆಂಬರ್ 2022, 14:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಔಗಾದೌಗು (ಬುರ್ಕಿನಾ ಫಾಸೊ): ಉತ್ತರ ಬುರ್ಕಿನಾ ಫಾಸೊದಲ್ಲಿ ರಸ್ತೆ ಬದಿ ಇಟ್ಟಿದ್ದ ಬಾಂಬ್‌ ಸ್ಫೋಟಗೊಂಡು ಕನಿಷ್ಠ 35 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.

ಸೋಮವಾರ ಸೇನಾ ವಾಹನ ನಾಗರಿಕರನ್ನು ಹೊತ್ತು ಬೌರ್‌ಝಂಗಾ ಮತ್ತು ಡಿಜಿಬೊ ನಗರದ ಮಧ್ಯೆ ಸಾಗುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎಂದು ಸಹೇಲ್‌ ಪ್ರದೇಶದ ಗವರ್ನರ್‌ ಲೆ.ಕರ್ನಲ್‌ ರೊಡೊಲ್ಫೆ ಸೊರ್ಘೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತತ್‌ಕ್ಷಣಕ್ಕೆ ಯಾವುದೇ ಉಗ್ರ ಸಂಘಟನೆಯೂ ದಾಳಿಯ ಹೊಣೆ ಹೊತ್ತಿಲ್ಲ. ಆದರೆ ಇಸ್ಲಾಮಿಕ್ ತೀವ್ರವಾದಿ ಭಯೋತ್ಪಾದಕ ಸಂಘಟನೆಗಳೇ ದಾಳಿ ನಡೆಸಿರಬಹುದೆಂದು ಶಂಕಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.