ADVERTISEMENT

ಕಾಬೂಲ್‌ ವಿಮಾನ ನಿಲ್ದಾಣ ತಾಲಿಬಾನ್‌ ನಿಯಂತ್ರಣಕ್ಕೆ

ಏಜೆನ್ಸೀಸ್
Published 31 ಆಗಸ್ಟ್ 2021, 5:26 IST
Last Updated 31 ಆಗಸ್ಟ್ 2021, 5:26 IST
ಕಾಬೂಲ್‌ ವಿಮಾನ ನಿಲ್ದಾಣದ ಚಿತ್ರ
ಕಾಬೂಲ್‌ ವಿಮಾನ ನಿಲ್ದಾಣದ ಚಿತ್ರ    

ಕಾಬೂಲ್‌: ತಾಲಿಬಾನ್ ಮುಖಂಡರು ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇನಲ್ಲಿ ನಡೆದಾಡಿದರು. ಆ ಮೂಲಕ, ‘ಅಮೆರಿಕದ ಪಡೆಗಳು ನಿರ್ಗಮಿಸಿದ್ದು, ಗೆಲುವು ನಮ್ಮದೇ. ಈಗ ವಿಮಾನ ನಿಲ್ಧಾಣ ನಮ್ಮ ನಿಯಂತ್ರಣದಲ್ಲಿದೆ’ ಎಂಬ ಸಂದೇಶವನ್ನು ರವಾನಿಸಿದರು.

ತಾಲಿಬಾನ್‌ ವಕ್ತಾರ ಝಬೀ ಉಲ್ಲಾ ಮುಜಾಹಿದ್‌ ಹಾಗೂ ಇತರ ಮುಖಂಡರು ಈ ರನ್‌ವೇನಲ್ಲಿ ನಡೆದಾಡಿದ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರವನ್ನೂ ಮಾಡಲಾಗಿದೆ.

‘ಜಗತ್ತು ಈಗ ಪಾಠ ಕಲಿತಿದೆ. ನಮಗೆ ಈಗ ಸಂಭ್ರಮಿಸುವ ಕ್ಷಣ’ ಎಂದು ಮುಜಾಹಿದ್‌ ಹೇಳಿರುವುದು ಪ್ರಸಾರವಾಗಿದೆ.

ADVERTISEMENT

ತಾಲಿಬಾನ್‌ ಅಧಿಕಾರಿಗಳು, ಖಾಲಿ ಇದ್ದ ರನ್‌ವೇನ ಚಿತ್ರೀಕರಣವನ್ನೂ ಮಾಡಿದ್ದಾರೆ. ಸಂಘಟನೆಯ ವಿಶೇಷ ಪಡೆಯ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.