ADVERTISEMENT

ಅಫ್ಗಾನ್‌: ತಾಲಿಬಾನ್‌ ದಾಳಿ

ಏಜೆನ್ಸೀಸ್
Published 31 ಆಗಸ್ಟ್ 2019, 20:00 IST
Last Updated 31 ಆಗಸ್ಟ್ 2019, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾಬೂಲ್‌: ಅಫ್ಗಾನಿಸ್ತಾನದ ಅತಿದೊಡ್ಡ ನಗರಗಳಲ್ಲಿ ಒಂದಾದ ಕುಂದುಜ್‌ ಮೇಲೆ ತಾಲಿಬಾನ್‌ ದೊಡ್ಡ ಪ್ರಮಾಣದ ದಾಳಿ ನಡೆಸಿದೆ ಎಂದು ಸರ್ಕಾರ ಶನಿವಾರ ತಿಳಿಸಿದೆ.

ಉಗ್ರರು ಕುಂದುಜ್‌ ಆಸ್ಪತ್ರೆಯ ರೋಗಿಗಳನ್ನು ಒತ್ತೆಯಾಳುಗಳ ರೀತಿ ಕರೆದುಕೊಂಡು ಹೋಗಿದ್ದಾರೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಉಗ್ರರ ದಾಳಿಗೆ ಪ್ರತಿಯಾಗಿ ಸೇನೆ ವೈಮಾನಿಕ ದಾಳಿ ನಡೆಸಿದ್ದು, 26 ತಾಲಿ ಬಾನಿಗಳು ಮೃತಪಟ್ಟಿದ್ದಾರೆ.

‘ಉತ್ತರ ಅಫ್ಗಾನ್‌ ಮತ್ತು ರಾಜ ಧಾನಿ ಕಾಬೂಲ್‌ಗೆ ಸುಲಭವಾಗಿ ಪ್ರವೇಶಿಸಬಹುದಾದ ಆಯಕಟ್ಟಿನ ಸ್ಥಳಗಳಲ್ಲಿ ಭದ್ರತಾ ಪಡೆಗಳು ಉಗ್ರರನ್ನು ಹಿಮ್ಮೆಟ್ಟಿಸುತ್ತಿವೆ’ ಎಂದು ಅಧ್ಯಕ್ಷರ ವಕ್ತಾರ ಸಿದಿಕ್‌ ಸಿದ್ದಿಕಿ ತಿಳಿಸಿದ್ದಾರೆ.

ADVERTISEMENT

ಎಲ್ಲಾ ವಿದೇಶಿ ಪಡೆಗಳು ದೇಶವನ್ನು ತೊರೆಯಬೇಕೆಂದು ಉಗ್ರರು ಒತ್ತಾಯಿಸಿದ್ದಾರೆ. ಈ ದಾಳಿಯಲ್ಲಿ ಎಷ್ಟು ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂಬುದು ತಿಳಿದುಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.