ADVERTISEMENT

ಅಮೆರಿಕ ಸೇರಿದಂತೆ ಇತರೆ ದೇಶಗಳ ಪ್ರಜೆಗಳಿಗೆ ತೆರಳಲು ಅನುಮತಿ ನೀಡಿದ ತಾಲಿಬಾನ್‌

ರಾಯಿಟರ್ಸ್
Published 9 ಸೆಪ್ಟೆಂಬರ್ 2021, 5:30 IST
Last Updated 9 ಸೆಪ್ಟೆಂಬರ್ 2021, 5:30 IST
ಕಾಬೂಲ್‌ನಿಂದ ಅಮೆರಿಕಕ್ಕೆ ಹೊರಡಲು ಸಿದ್ಧವಾಗಿರುವ ಅಫ್ಗನ್‌ ನಿರಾಶ್ರಿತರು (ಸಂಗ್ರಹ ಚಿತ್ರ)
ಕಾಬೂಲ್‌ನಿಂದ ಅಮೆರಿಕಕ್ಕೆ ಹೊರಡಲು ಸಿದ್ಧವಾಗಿರುವ ಅಫ್ಗನ್‌ ನಿರಾಶ್ರಿತರು (ಸಂಗ್ರಹ ಚಿತ್ರ)   

ವಾಷಿಂಗ್ಟನ್‌:‌ ಅಫ್ಗಾನಿಸ್ತಾನದಲ್ಲಿ ಉಳಿದಿರುವ ಅಮೆರಿಕದ 200 ನಾಗರಿಕರು ಮತ್ತು ಇತರ ರಾಷ್ಟ್ರಗಳ ನಾಗರಿಕರಿಗೆ ವಿಮಾನಗಳ ಮೂಲಕ ಕಾಬೂಲ್‌ ವಿಮಾನ ನಿಲ್ದಾಣದಿಂದ ನಿರ್ಗಮಿಸಲು ತಾಲಿಬಾನ್ ಅಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮೆರಿಕದ ವಿಶೇಷ ಪ್ರತಿನಿಧಿ ಅಲ್ಮಯ್‌ ಖಲೀಲ್ಜಾದ್ ಅವರು ವಿದೇಶಿ ಪ್ರಜೆಗಳು ತೆರಳಲು ಅನುಮತಿ ನೀಡುವಂತೆ ತಾಲಿಬಾನ್‌ ಅನ್ನು ಒತ್ತಾಯಿಸಿದ್ದರು ಎಂದು ಹೆಸರು ಹೇಳಲಿಚ್ಚಸದ ಅಧಿಕಾರಿಯೊಬ್ಬರು ರಾಯಿಟರ್ಸ್‌ ಸುದ್ದಿ ಸಂಸ್ಥೆಗೆ ತಿಳಿಸಿದರು. ಅಮೆರಿಕ ಮತ್ತು ಇತರ ರಾಷ್ಟ್ರಗಳ ಪ್ರಜೆಗಳು ಕಾಬೂಲ್‌ನಿಂದ ಗುರುವಾರ ಹೊರಡುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT