ADVERTISEMENT

ಬದ್ಧತೆ ಪ್ರದರ್ಶಿಸಿ ತಾಲಿಬಾನ್‌ ಜಾಗತಿಕ ಬೆಂಬಲ ಪಡೆಯಲಿ: ಬ್ಲಿಂಕೆನ್

ಪಿಟಿಐ
Published 31 ಆಗಸ್ಟ್ 2021, 6:08 IST
Last Updated 31 ಆಗಸ್ಟ್ 2021, 6:08 IST
ಬ್ಲಿಂಕೆನ್‌
ಬ್ಲಿಂಕೆನ್‌   

ವಾಷಿಂಗ್ಟನ್‌: ‘ತನ್ನ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಗೌರವಿಸುವುದು, ಪ್ರಯಾಣ ಕೈಗೊಳ್ಳುವ ಸ್ವಾತಂತ್ರ್ಯ ನೀಡುವುದು ಹಾಗೂ ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿ ಬದ್ಧತೆ ಪ್ರದರ್ಶಿಸುವ ಮೂಲಕ ತಾಲಿಬಾನ್‌, ವಿಶ್ವ ಸಮುದಾಯದ ಬೆಂಬಲ ಗಳಿಸಬೇಕು’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟೊನಿ ಬ್ಲಿಂಕೆನ್‌ ಹೇಳಿದ್ದಾರೆ.

ಅಫ್ಗಾನಿಸ್ತಾನದಿಂದ ಅಮೆರಿಕದ ಪಡೆಗಳ ನಿರ್ಗಮನ ಕಾರ್ಯ ಪೂರ್ಣಗೊಂಡ ಬಳಿಕ ದೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ತಾಲಿಬಾನ್‌ ತಾನು ರಚಿಸುವ ಸರ್ಕಾರಕ್ಕೆ ಜಾಗತಿಕ ಸಮುದಾಯದ ಬೆಂಬಲ ಹಾಗೂ ಸಮರ್ಥನೆಯನ್ನು ಕೇಳುತ್ತಿದೆ. ಆದರೆ, ತಾನು ಕೊಟ್ಟ ಮಾತಿನಂತೆ ನಡೆಯುವ ಮೂಲಕ ಇಂಥ ಸಮರ್ಥನೆ ಹಾಗೂ ಬೆಂಬಲವನ್ನು ಅದು ಗಳಿಸಬೇಕು’ ಎಂದು ಬ್ಲಿಂಕೆನ್‌ ಹೇಳಿದರು.

ADVERTISEMENT

‘ತಾಲಿಬಾನ್‌ ನೇತೃತ್ವದ ಸರ್ಕಾರದೊಂದಿಗೆ ಅಮೆರಿಕ ಕಾರ್ಯ ನಿರ್ವಹಿಸಲಿದೆ. ಆದರೆ, ತಾಲಿಬಾನ್‌ ಸರ್ಕಾರದ ಹೇಳಿಕೆಗಳ ಬದಲಾಗಿ ಅದು ತಾನು ನೀಡಿದ್ದ ಭರವಸೆಗಳನ್ನು ಎಷ್ಟರ ಮಟ್ಟಿಗೆ ಈಡೇರಿಸಿದೆ ಎಂಬುದರ ಮೇಲೆ ಇದು ಅವಲಂಬಿಸಿದೆ’ ಎಂದೂ ಸ್ಪಷ್ಟಪಡಿಸಿದರು.

‘ಆ ದೇಶದ ಅಲ್ಪ ಸಂಖ್ಯಾತರ ಹಾಗೂ ಮಹಿಳೆಯರ ಹಕ್ಕುಗಳನ್ನು ದಮನ ಮಾಡಬಾರದು. ಎಲ್ಲರ ಒಳಗೊಳ್ಳುವಿಕೆ ಇರುವ ಸರ್ಕಾರವನ್ನು ತಾಲಿಬಾನ್‌ ರಚಿಸಬೇಕು’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.