ADVERTISEMENT

ಸಿಂಗಪುರ: ವಿಜೃಂಭಣೆಯಿಂದ ನಡೆದ ಥೈಪುಸಂ ಉತ್ಸವ

ಪಿಟಿಐ
Published 6 ಫೆಬ್ರುವರಿ 2023, 14:18 IST
Last Updated 6 ಫೆಬ್ರುವರಿ 2023, 14:18 IST
.
.   

ಸಿಂಗಪುರ: ಥೈಪುಸಂ ಉತ್ಸವವನ್ನು ಭಾನುವಾರ ಸಿಂಗಪುರದಲ್ಲಿರುವ ತಮಿಳು ಸಮುದಾಯದವರು ಸಂಭ್ರಮದಿಂದ ಆಚರಿಸಿದರು.

ಈ ಹಬ್ಬವು ಮುರುಗನ್‌ ದೇವರನ್ನು ಸ್ಮರಿಸುವ ಉತ್ಸವವಾಗಿದ್ದು, ಸಾವಿರಾರು ಭಕ್ತರು ಭಾಗವಹಿಸಿದ್ದರು.

ಇಲ್ಲಿನ ಶ್ರೀನಿವಾಸ ಮೆರುಮಲ್‌ ದೇವಾಲಯದಲ್ಲಿ ಉತ್ಸವದ ಅಂಗವಾಗಿ 35,000 ಹೆಚ್ಚು ಭಕ್ತರು ಸೇರಿದ್ದರು. ತೆಂಡಯುತಾಣಿ ದೇವಾಲಯಕ್ಕೂ ಹಾಲಿನ ಕಳಶವನ್ನು ಹೊತ್ತು ಬಂದರು. 450 ಮಂದಿ ಬರಿಗಾಲಲ್ಲಿ 3.2 ಕಿ.ಮೀ ದೂರ ನಡೆದು ಮುರುಗನ್ ದೇವರ ದರ್ಶನ ಪಡೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.