ಪ್ರವಾಹ (ಪ್ರಾತಿನಿಧಿಕ ಚಿತ್ರ)
ಬ್ಯೂನಸ್ ಏರೀಸ್: ಅರ್ಜೆಂಟೀನಾದ ಬಂದರು ನಗರ ಬಹಿಯಾ ಬ್ಲಾಂಕಾದಲ್ಲಿ ಭಾರಿ ಮಳೆಯಾಗಿ ಉಂಟಾದ ಪ್ರವಾಹದಿಂದಾಗಿ ಕನಿಷ್ಠ 10 ಮಂದಿ ಮೃತಪಟ್ಟಿದ್ದು, ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ.
ನಗರದಲ್ಲಿ ಸತತವಾಗಿ ಮಳೆ ಸುರಿದಿದ್ದು, 8 ಗಂಟೆಯಲ್ಲಿ 40 ಸೆಂ.ಮೀನಷ್ಟು ಮಳೆಯಾಗಿದೆ. ಇದು, ಇಲ್ಲಿ ಒಂದು ವರ್ಷದಲ್ಲಿ ಬೀಳುವ ವಾಡಿಕೆ ಮಳೆ ಪ್ರಮಾಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮನೆಗಳು, ಆಸ್ಪತ್ರೆಗಳಿಗೆ ನೀರು ನುಗ್ಗಿ ಜನರು–ರೋಗಿಗಳು ಪರದಾಡುವಂತಾಗಿದೆ. ನಗರದ ಜೋಸ್ ಪೆನ್ನಾ ಆಸ್ಪತ್ರೆ ಹೆಚ್ಚು ಬಾಧಿತವಾಗಿದ್ದು, ಎಲ್ಲ ರೋಗಿಗಳನ್ನು ಅಧಿಕಾರಿಗಳು ಸ್ಥಳಾಂತರಗೊಳಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ನವಜಾತ ಶಿಶುಗಳ ನಿಗಾ ಘಟಕದಿಂದ ಶಿಶುಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುತ್ತಿರುವ ಚಿತ್ರಗಳು ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.