ADVERTISEMENT

‘ಆತ್ಮಾಹುತಿ ದಾಳಿಗೆ ಯತ್ನಿಸಿದ್ದ ಉಗ್ರರು’

ಪಿಟಿಐ
Published 6 ನವೆಂಬರ್ 2019, 20:29 IST
Last Updated 6 ನವೆಂಬರ್ 2019, 20:29 IST

ವಾಷಿಂಗ್ಟನ್‌: ದಕ್ಷಿಣ ಏಷ್ಯಾದಲ್ಲಿ ಸಕ್ರಿಯವಾಗಿರುವ ಐಎಸ್‌ ಉಗ್ರರ ಸಹಯೋಗಿ ಸಂಘಟನೆ ಐಎಸ್‌–ಕೆ (ಇಸ್ಲಾಇಮಿಕ್‌ ಸ್ಟೇಟ್‌–ಖೊರಾಸನ್‌) ಕಳೆದ ವರ್ಷ ಭಾರತದಲ್ಲಿ ಆತ್ಮಾಹುತಿ ದಾಳಿಗೆ ಯತ್ನಿಸಿತ್ತು. ಆದರೆ, ಅದು ವಿಫಲಗೊಂಡಿತು ಎಂದು ಅಮೆರಿಕದ ಭಯೋತ್ಪಾದನಾ ನಿಗ್ರಹ ಘಟಕದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಐಎಸ್‌ ಮತ್ತು ಅದರ ಸಹ ಸಂಘಟನೆಗಳ ಕಾರ್ಯಚಟುವಟಿಕೆಗಳ ಮೇಲೆ ಅಮೆರಿಕ ನಿಗಾ ವಹಿಸಿದೆ. ಐಎಸ್‌–ಕೆ ಸಂಘಟನೆ 4,000 ಮಂದಿ ಉಗ್ರರನ್ನು ಹೊಂದಿರುವ ಸಾಧ್ಯತೆ ಇದೆ’ ಎಂದು ಭಯೋತ್ಪಾದನಾ ನಿಗ್ರಹ ಕೇಂದ್ರ ಮತ್ತು ಗುಪ್ತಚರ ಇಲಾಖೆಯ ಹಂಗಾಮಿ ನಿರ್ದೇಶಕ ರಸೆಲ್‌ ಟ್ರಾವರ್ಸ್‌ ಅವರು ಭಾರತ ಮೂಲದ ಸೆನೆಟರ್‌ ಮ್ಯಾಗಿ ಹಸನ್‌ ಅವರ ಪ್ರಶ್ನೆಗೆ ಮಂಗಳವಾರ ಉತ್ತರ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT