ADVERTISEMENT

ಪಾಕಿಸ್ತಾನ ಸಚಿವ ಸನಾವುಲ್ಲಾ ವಿರುದ್ಧ ಭಯೋತ್ಪಾದನೆ ಪ್ರಕರಣ ದಾಖಲು

ಪಿಟಿಐ
Published 26 ಆಗಸ್ಟ್ 2022, 11:10 IST
Last Updated 26 ಆಗಸ್ಟ್ 2022, 11:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಾಹೋರ್‌: ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಸಚಿವ ರಾಣಾ ಸನಾವುಲ್ಲಾ ಅವರ ವಿರುದ್ಧಪಂಜಾಬ್‌ ಪ್ರಾಂತ್ಯದಲ್ಲಿ ಗುರುವಾರ ಭಯೋತ್ಪಾದನೆಪ್ರಕರಣ ದಾಖಲಾಗಿದೆ. ಅಲ್ಲದೆ ನ್ಯಾಯಾಂಗ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಒಡ್ಡಿದ ಆರೋಪ ಸಂಬಂಧವೂ ದೂರು ದಾಖಲಿಸಲಾಗಿದೆ.

‘ಆಗಸ್ಟ್‌ 21ರಂದು ಜಿಯೋ ನ್ಯೂಸ್‌ನ ಕಾರ್ಯಕ್ರಮವೊಂದರಲ್ಲಿ ಸನಾವುಲ್ಲಾ ಅವರ ಭಾಷಣವನ್ನು ಪ್ರಸಾರ ಮಾಡಲಾಗಿತ್ತು. ಅದರಲ್ಲಿ ಸನಾವುಲ್ಲಾ ಅವರು ನ್ಯಾಯಾಂಗ ಮತ್ತು ಪಂಜಾಬ್ ಮುಖ್ಯ ಕಾರ್ಯದರ್ಶಿ, ಲಾಹೋರ್‌ ಆಯುಕ್ತರು ಮತ್ತು ಅವರ ಮಕ್ಕಳಿಗೆ ಬೆದರಿಕೆ ಹಾಕಿದ್ದರು’ ಎಂದುಇಲ್ಲಿನ ಗುಜ್ರತ್‌ ನಗರ ನಿವಾಸಿ ದೂರಿನಲ್ಲಿ ತಿಳಿಸಿದ್ದಾರೆ.

‘ನೀವು (ಸನವುಲ್ಲಾ) ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದೀರಿ. ಈಗ ಪಾಕಿಸ್ತಾನದ ಜನರು ನಿಮ್ಮ ವಿರುದ್ಧ ನ್ಯಾಯಯುತ ದೂರು ದಾಖಲಿಸಿದ್ದಾರೆ. ಶೀಘ್ರವೇ ನೀವು ಬಂಧನಕ್ಕೊಳಗಾಗಲಿದ್ದೀರಿ’ ಎಂದು ಆಂತರಿಕ ವ್ಯವಹಾರಗಳ ಖಾತೆ ಮಾಜಿ ಸಚಿವ ಮೂನಿಸ್‌ ಎಲಹಿ ಅವರು ಟ್ವೀಟ್‌ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.