ADVERTISEMENT

ಟೆಕ್ಸಾಸ್‌: 80 ನವಜಾತ ಶಿಶುಗಳಲ್ಲಿ ಸೋಂಕು

ಏಜೆನ್ಸೀಸ್
Published 19 ಜುಲೈ 2020, 7:27 IST
Last Updated 19 ಜುಲೈ 2020, 7:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಆಸ್ಟಿನ್ ‌(ಅಮೆರಿಕ): ಇಲ್ಲಿ ವರ್ಷದೊಳಗಿನ 80 ನವಜಾತ ಶಿಶುಗಳಲ್ಲಿ ಕೊರೊನಾ ಸೋಂಕು ಧೃಢಪಟ್ಟಿದೆ ಎಂದುಶುಕ್ರವಾರ ಟೆಕ್ಸಾಸ್‌ ಗಲ್ಫ್‌ ಕೋಸ್ಟ್‌ನ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಆ ಮಕ್ಕಳು ತಮ್ಮ ಮೊದಲ ಹುಟ್ಟು ಹಬ್ಬವನ್ನೇ ಇನ್ನೂ ಆಚರಿಸಿಕೊಂಡಿಲ್ಲ. ಹಾಗಾಗಿ ಎಲ್ಲರೂ ಕಡ್ಡಾಯವಾಗಿ ಮುಖಗವಸನ್ನು ಧರಿಸಬೇಕು, ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರ ಬರಬೇಕು, ಅಂತರ ಕಾಯ್ದುಕೊಳ್ಳಬೇಕು. ಈ ಮೂಲಕ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ನಮ್ಮದೊಂದಿಗೆ ಸಹಕರಿಸಬೇಕು’ಎಂದು ಕೊರ್ಪಸ್‌ ಕ್ರಿಸ್ಟಿ ನ್ಯೂಸೆಸ್‌ನ ಸಾರ್ವಜನಿಕ ಆರೋಗ್ಯ ನಿರ್ದೇಶಕ ಅನೆಟ್ ರೊಡ್ರಿಗಸ್ ಮನವಿ ಮಾಡಿದ್ದಾರೆ.

ಟೆಕ್ಸಾಸ್‌ನಲ್ಲಿ ಶನಿವಾರವೂ 10,000 ಹೊಸ ಪ್ರಕರಣಗಳು ವರದಿಯಾಗಿವೆ.ಸತತ ಐದನೇ ದಿನ ಇಷ್ಟು ಸಂಖ್ಯೆಯ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಟೆಕ್ಸಾಸ್‌ನಲ್ಲಿ ಸೋಂಕಿತರ ಸಂಖ್ಯೆ 3.17 ಲಕ್ಷ ತಲುಪಿದ್ದು, 3,865 ಮಂದಿ ಸೋಂಕಿಗೆ ಅಸುನೀಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.