ADVERTISEMENT

ಥಾಯ್ ನೈಟ್‌ಕ್ಲಬ್‌ ಅಗ್ನಿ ಅವಘಡ: ಮೃತರ ಸಂಖ್ಯೆ 15ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 12:40 IST
Last Updated 6 ಆಗಸ್ಟ್ 2022, 12:40 IST
ಬ್ಯಾಂಕಾಕ್‌ನ  ಮೌಂಟೇನ್ ಬಿ ನೈಟ್‌ ಕ್ಲಬ್‌ ನಲ್ಲಿ ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ. ಚಿತ್ರ–ಎಎಫ್‌ಪಿ
ಬ್ಯಾಂಕಾಕ್‌ನ  ಮೌಂಟೇನ್ ಬಿ ನೈಟ್‌ ಕ್ಲಬ್‌ ನಲ್ಲಿ ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ. ಚಿತ್ರ–ಎಎಫ್‌ಪಿ   

ಬ್ಯಾಂಕಾಕ್: ಥಾಯ್ ನೈಟ್‌ ಕ್ಲಬ್ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ ಎಂದು ರಕ್ಷಣಾ ಸೇವೆ ತಿಳಿಸಿದೆ.

ಬ್ಯಾಂಕಾಕ್‌ನ ಆಗ್ನೇಯಕ್ಕೆ ಸುಮಾರು 150 ಕಿಲೋ ಮೀಟರ್‌ ದೂರದಲ್ಲಿರುವ ಚೋನ್‌ಬುರಿ ಪ್ರಾಂತ್ಯದ ಸತ್ತಾಹಿಪ್ ಜಿಲ್ಲೆಯ ಮೌಂಟೇನ್ ಬಿ ನೈಟ್‌ಸ್ಪಾಟ್‌ನಲ್ಲಿ ಗುರುವಾರ ಮಧ್ಯರಾತ್ರಿ 1 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ.ಶನಿವಾರ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 15ಕ್ಕೆ ತಲುಪಿದೆ.

ಸ್ನಾನಗೃಹ ಹಾಗೂ ಪ್ರವೇಶ ದ್ವಾರ ಬಳಿ ನಾಲ್ವರು ಮಹಿಳೆಯರು ಹಾಗೂ ಪುರುಷರ ಮೃತದೇಹಗಳು ಪತ್ತೆಯಾಗಿದೆ. ಎಲ್ಲರೂ ಥಾಯ್‌ ನಿವಾಸಿಗಳು ಎಂದು ಹೇಳಲಾಗಿದೆ.

ADVERTISEMENT

ಕ್ಲಬ್‌ನಲ್ಲಿ ಬೆಂಕಿ ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ದಳ ಸಿಬ್ಬಂದಿ ಮೂರು ತಾಸು ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ.ಬೆಂಕಿ ಹೊತ್ತಿಕೊಂಡ ವೇಳೆ ನೈಟ್‌ಕ್ಲಬ್‌ನ ಕೆಲವು ಬಾಗಿಲಿಗೆ ಬೀಗ ಹಾಕಲಾಗಿತ್ತು ಎಂಬ ವರದಿಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.