ADVERTISEMENT

ಮಾಸ್ಕ್‌ ಧರಿಸದ ಥಾಯ್ಲೆಂಡ್‌ ಪ್ರಧಾನಿಗೆ ದಂಡ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 15:13 IST
Last Updated 26 ಏಪ್ರಿಲ್ 2021, 15:13 IST
ಪ್ರಯುಥ್‌ ಚಾನ್‌–ಒಚಾ
ಪ್ರಯುಥ್‌ ಚಾನ್‌–ಒಚಾ   

ಬ್ಯಾಂಕಾಕ್‌:‌ ಮುಖಕ್ಕೆ ಮಾಸ್ಕ್‌ ಧರಿಸದ ಥಾಯ್ಲೆಂಡ್‌ ಪ್ರಧಾನಿ ಪ್ರಯುಥ್‌ ಚಾನ್‌–ಒಚಾ ಅವರಿಗೆ ಸೋಮವಾರ 190 ಡಾಲರ್‌ (₹14,223) ದಂಡ ವಿಧಿಸಲಾಗಿದೆ.

ಸಭೆಯೊಂದರಲ್ಲಿ ಮಾಸ್ಕ್‌ ಧರಿಸದೆ ಒಚಾ ಅವರು ಭಾಗವಹಿಸಿದ್ದ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿತ್ತು. ಈ ಚಿತ್ರವನ್ನು ಆಧರಿಸಿ ದಂಡ ವಿಧಿಸಲಾಗಿದೆ. ಬಳಿಕ ಈ ಚಿತ್ರವನ್ನು ತೆಗೆದುಹಾಕಲಾಗಿದೆ.

‘ಮಾಸ್ಕ್‌ ಧರಿಸದೆ ಇರುವುದು ನಿಯಮಗಳ ಉಲ್ಲಂಘನೆಯಾಗುತ್ತದೆ ಎಂದು ನಾನು ಪ್ರಧಾನಿ ಅವರಿಗೆ ತಿಳಿಸಿದೆ’ ಎಂದು ಬ್ಯಾಂಕಾಕ್‌ ರಾಜ್ಯಪಾಲ ಅಶ್ವಿನ್‌ ಕ್ವನ್ಮುಂಗ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.