ADVERTISEMENT

ಬೆಂಗಾವಲು ಪಡೆಯ ಉಪ ನಾಯಕಿಯನ್ನು ವರಿಸಿದ ಥ್ಯಾಯ್ಲೆಂಡ್ ಮಹಾರಾಜ

​ಪ್ರಜಾವಾಣಿ ವಾರ್ತೆ
Published 2 ಮೇ 2019, 10:14 IST
Last Updated 2 ಮೇ 2019, 10:14 IST
   

ಬ್ಯಾಂಕಾಕ್: ಪಟ್ಟಾಭಿಷೇಕಕ್ಕೆ ಒಂದು ದಿನ ಬಾಕಿ ಇರುವಾಗ ಥಾಯ್ಲೆಂಡ್ ಮಹಾರಾಜ ಮಹಾ ವಜಿರಲಾಂಗ್‌ಕಾಮ್ ಬುಧವಾರ ತನ್ನ ಬೆಂಗಾವಲು ಪಡೆಯ ಉಪ ನಾಯಕಿಸುಥಿದಾ ತಿದ್‌ಜಾಯಿ ಅವರನ್ನುಮದುವೆಯಾಗಿದ್ದಾರೆ.

ಅರಮನೆಯ ಪ್ರಕಟಣೆಯಲ್ಲಿ ಮದುವೆ ವಿಷಯ ಪ್ರಕಟಿಸಿದ್ದು, ಮದುವೆ ಸಮಾರಂಭದ ಚಿತ್ರಗಳನ್ನು ಥಾಯ್ಲೆಂಡ್ ಸುದ್ದಿವಾಹಿನಿಗಳು ಬುಧವಾರ ರಾತ್ರಿ ಪ್ರಸಾರ ಮಾಡಿವೆ.

ವಜಿರಲಾಂಗ್‌ಕಾಮ್ (66) ಅವರನ್ನು ಕಿರಿಯ ಮಹಾರಾಜ ರಾಮಾ X ಎಂದು ಕರೆಯುತ್ತಾರೆ. 70 ವರ್ಷ ಅಧಿಕಾರ ನಡೆಸಿದ ಮಹಾರಾಜ ಭೂಮಿಬೋಲ್ ಅಬ್ದುಲ್ಯದೆಜ್ ಅಕ್ಟೋಬರ್ 2016ರಲ್ಲಿ ಮರಣಹೊಂದಿದ್ದರು. ಇವರ ಮರಣಾನಂತರ ಸಂವಿಧಾನ ಪ್ರಕಾರ ವಜಿರಲಾಂಗ್‌ಕಾಮ್ ಮಹಾರಾಜ ಪಟ್ಟಕ್ಕೇರಿದ್ದರು.

ADVERTISEMENT

ಬೌದ್ಧ ಮತ್ತು ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಶನಿವಾರ ಪಟ್ಟಾಭಿಷೇಕ ನಡೆಯಲಿದ್ದು, ಭಾನುವಾರ ಬ್ಯಾಂಕಾಕ್‍ನಲ್ಲಿ ಮೆರವಣಿಗೆ ನಡೆಯಲಿದೆ.

2014ರಲ್ಲಿ ವಜಿರಲಾಂಗ್‌ಕಾಮ್ ಅವರು ಥಾಯ್ ಏರ್‌ವೇಸ್‍ನ ಮಾಜಿ ಗಗನಸಖಿ ಸುಥಿದಾ ತಿದ್‌ಜಾಯಿ ಅವರನ್ನು ತಮ್ಮ ಬೆಂಗಾವಲು ಪಡೆಯ ಡೆಪ್ಯುಟಿ ಕಮಾಂಡರ್ ಆಗಿ ನೇಮಕ ಮಾಡಲಾಗಿತ್ತು.

ಕೆಲವೊಂದು ಮಾಧ್ಯಮಗಳು ಸುಥಿದಾ ಮತ್ತು ಮಹಾರಾಜನ ನಡುವೆ ಪ್ರಣಯ ಸಂಬಂಧ ಇದೆ ಎಂದು ವರದಿ ಮಾಡಿದ್ದರೂ ಇವರಿಬ್ಬರೂ ಇಲ್ಲಿಯವರೆಗೆ ಅದನ್ನು ಒಪ್ಪಿಕೊಂಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.