ADVERTISEMENT

ಪತ್ನಿ ಕೊಂದು, ಆಕೆಯ ರುಂಡ ಹಿಡಿದು ರಸ್ತೆಯಲ್ಲಿ ಸುತ್ತಾಡಿದ ಪತಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 12:25 IST
Last Updated 9 ಫೆಬ್ರುವರಿ 2022, 12:25 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಟೆಹರಾನ್‌: ಪತ್ನಿಯನ್ನು ಕೊಂದು ಆಕೆಯ ರುಂಡವನ್ನು ಕೈಯಲ್ಲಿ ಹಿಡಿದು ರಸ್ತೆಯಲ್ಲಿ ಸುತ್ತಾಡಿದ ಪತಿ ಅವಿರಾಲ್‌ನನ್ನು ಇರಾನ್‌ ಪೊಲೀಸರು ಬಂಧಿಸಿದ್ದಾರೆ.

ನೈಋತ್ಯ ಇರಾನ್‌ನ ಆಹ್ವಾಜ್‌ ಎಂಬ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಕೊಲೆಯಾದ ಮಹಿಳೆಯನ್ನು ಮೋನಾ ಹೈದರಿ (17 ವರ್ಷ) ಎಂದು ಗುರುತಿಸಲಾಗಿದೆ. ಕಳೆದ ವರ್ಷ ಮೋನಾ ಹೈದರಿ ಹಾಗೂ ಅವಿರಾಲ್‌ ಕಳೆದ ವರ್ಷ ಮದುವೆಯಾಗಿದ್ದರು ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

ಮೋನಾ ಹಾಗೂ ಅವಿರಾಲ್ ನಡುವೆ ವೈವಾಹಿಕ ಜೀವನ ಸರಿ ಇರಲಿಲ್ಲ. ಮೋನಾ ಬೇರೆ ಯುವಕನೊಂದಿಗೆ ಪರಾರಿಯಾಗಿದ್ದರು. ಮೋನಾರನ್ನು ಪತ್ತೆ ಹಚ್ಚಿದ ಅವಿರಾಲ್‌ ಅವರನ್ನು ನಂಬಿಸಿ ಮತ್ತೆ ಮನೆಗೆ ಕರೆದುಕೊಂಡು ಬಂದಿದ್ದರು.

ADVERTISEMENT

ಮೋನಾ ಮನೆಗೆ ಬಂದ ಎರಡು ದಿನಗಳಲ್ಲಿ ಅವಿರಾಲ್‌ ಕೊಲೆ ಮಾಡಿದ್ದು, ರುಂಡವನ್ನು ರಸ್ತೆಯಲ್ಲಿ ಹಿಡಿದುಕೊಂಡು ಸುತ್ತಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.