ADVERTISEMENT

ಕಾಬೂಲ್ ದಾಳಿಗೆ ಪ್ರತೀಕಾರ: ಐಸಿಸ್ ಖುರಾಸನ್ ಉಗ್ರರ ಮೇಲೆ ಅಮೆರಿಕ ಡ್ರೋನ್ ದಾಳಿ

ಏಜೆನ್ಸೀಸ್
Published 28 ಆಗಸ್ಟ್ 2021, 3:43 IST
Last Updated 28 ಆಗಸ್ಟ್ 2021, 3:43 IST
ಕಾಬೂಲ್ ದಾಳಿಗೆ ಪ್ರತೀಕಾರ
ಕಾಬೂಲ್ ದಾಳಿಗೆ ಪ್ರತೀಕಾರ   

ಕಾಬೂಲ್: ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯ ಹೊಣೆ ಹೊತ್ತಿರುವ ಅಫ್ಗಾನಿಸ್ತಾನದ ಐಸಿಸ್ ಖುರಾಸನ್ ಘಟಕದಉಗ್ರರ ಗುಂಪಿನ ಮೇಲೆ ಡ್ರೋನ್ ದಾಳಿ ನಡೆಸಿರುವುದಾಗಿ ಅಮೆರಿಕ ಮಿಲಿಟರಿ ಹೇಳಿದೆ.

‘ಅಫ್ಗಾನಿಸ್ತಾನದ ನಂಗರ್‌ಹಾರ್ ಪ್ರಾಂತ್ಯದಲ್ಲಿ ಮಾನವರಹಿತ ವಾಯುದಾಳಿ ನಡೆಸಿದ್ದು, ಆರಂಭಿಕ ವರದಿಗಳ ಪ್ರಕಾರ, ನಮ್ಮ ಗುರಿ ಇದ್ದ ಉಗ್ರಗಾಮಿಗಳನ್ನು ಕೊಂದಿದ್ದೇವೆ’ಎಂದು ಕೇಂದ್ರ ಕಮಾಂಡ್‌ನ ಕ್ಯಾಪ್ಟನ್ ಬಿಲ್ ಅರ್ಬನ್ ಹೇಳಿದ್ದಾರೆ.

‘ಯಾವುದೇ ನಾಗರಿಕರು ಈ ದಾಳಿಯಲ್ಲಿ ಮೃತಪಟ್ಟಿಲ್ಲ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಕಾಬೂಲ್ ದಾಳಿಯ ನಂತರ ಅಮೆರಿಕ ನಡೆಸಿದ ಮೊದಲ ಪ್ರತೀಕಾರದ ದಾಳಿ ಇದಾಗಿದೆ.

ಗುರುವಾರ, ಕಾಬೂಲ್ ವಿಮಾನ ನಿಲ್ದಾಣದ ಅಬ್ಬೆ ಗೇಟ್‌ನ ಬಳಿ ಆತ್ಮಹತ್ಯಾ ದಾಳಿಕೋರರು ಬಾಂಬ್ ಸ್ಫೋಟಿಸಿದಾಗ 13 ಮಂದಿ ಅಮೆರಿಕದ ಸೈನಿಕರು ಸೇರಿದಂತೆ 78 ಜನರು ಸಾವನ್ನಪ್ಪಿದ್ದರು. ಸಾವಿನ ಸಂಖ್ಯೆ 200ರ ಹತ್ತಿರದಲ್ಲಿದೆ ಎಂದುಕೆಲ ಮಾಧ್ಯಮಗಳು ವರದಿ ಮಾಡಿವೆ.

ಕಾಬೂಲ್ ದಾಳಿ ಬಳಿಕ ದಾಳಿಗೆ ಕಾರಣವಾದ ಇಸ್ಲಾಮಿಕ್ ಸ್ಟೇಟ್‌ ಗುಂಪಿನ ಅಫ್ಗಾನಿಸ್ತಾನದ ಅಂಗಸಂಸ್ಥೆ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುಡುಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.