ADVERTISEMENT

ಮ್ಯಾನ್ಮಾರ್‌: ಚುನಾವಣಾ ಅಧಿಕಾರಿ ಗೆರಿಲ್ಲಾಗಳಿಂದ ಹತ್ಯೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2023, 14:22 IST
Last Updated 23 ಏಪ್ರಿಲ್ 2023, 14:22 IST
   

ಬ್ಯಾಂಕಾಕ್‌ (ಎಪಿ): ಮ್ಯಾನ್ಮಾರ್‌ನ ಚುನಾವಣಾ ಅಧಿಕಾರಿಯೊಬ್ಬರನ್ನು ಗೆರಿಲ್ಲಾ ಗುಂಪೊಂದು ಶನಿವಾರ ಯಾಂಗನ್‌ನಲ್ಲಿ ಗುಂಡಿಟ್ಟು ಕೊಂದಿದೆ.

ಸೇನಾಡಳಿತ ನೇಮಕ ಮಾಡಿದ ಚುನಾವಣಾ ಆಯೋಗದ ಉಪನಿರ್ದೇಶಕ ಸಾಯ್‌ ಕ್ಯಾವ್‌ ಥೂ ಅವರು ಕಾರಿನಲ್ಲಿದ್ದಾಗ ಹಲವು ಬಾರಿ ಗುಂಡು ಹಾರಿಸಿ ಅವರನ್ನು ಕೊಲ್ಲಲಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.

2021ರ ಫೆಬ್ರುವರಿ 1ರಂದು ಆಂಗ್ ಸನ್‌ ಸೂ ಕಿ ನೇತೃತ್ವದ ಚುನಾಯಿತ ಸರ್ಕಾರವನ್ನು ಬುಡಮೇಲುಗೊಳಿಸಿದ ಸೇನೆ ಆಡಳಿತವನ್ನು ತನ್ನ ವಶಕ್ಕೆ ಪಡೆದ ಬಳಿಕ ದೇಶದ ಅತ್ಯಂತ ಹಿರಿಯ ಅಧಿಕಾರಿಯನ್ನು ಹತ್ಯೆ ಮಾಡಿದ ಪ್ರಥಮ ಪ್ರಕರಣ ಇದಾಗಿದೆ.

ADVERTISEMENT

ದೇಶದಲ್ಲಿ ಚುನಾವಣೆ ನಡೆಸುವ ಸನ್ನಿವೇಶ ಇಲ್ಲ ಎಂದು ಹೇಳಿದ್ದ ಸೇನಾಡಳಿತ, ಕಳೆದ ಫೆಬ್ರುವರಿಯಲ್ಲಿ ತುರ್ತು ಪರಿಸ್ಥಿತಿಯನ್ನು ವಿಸ್ತರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.