ADVERTISEMENT

ತೈವಾನ್‌: ರೈಲು ಅಪಘಾತದಲ್ಲಿ 34 ಮಂದಿ ಸಾವು; ಹಲವರಿಗೆ ಗಾಯ

ಏಜೆನ್ಸೀಸ್
Published 2 ಏಪ್ರಿಲ್ 2021, 6:26 IST
Last Updated 2 ಏಪ್ರಿಲ್ 2021, 6:26 IST
ತೈವಾನ್‌ನ ಹಳಿ ತಪ್ಪಿದ ರೈಲಿನಿಂದ ಹೊರ ಬರುತ್ತಿರುವ ಪ್ರಯಾಣಿಕರು    –ರಾಯಿಟರ್ಸ್‌ ಚಿತ್ರ
ತೈವಾನ್‌ನ ಹಳಿ ತಪ್ಪಿದ ರೈಲಿನಿಂದ ಹೊರ ಬರುತ್ತಿರುವ ಪ್ರಯಾಣಿಕರು    –ರಾಯಿಟರ್ಸ್‌ ಚಿತ್ರ   

ತೈಪೆ: ‘ತೈವಾನ್‌ನ ಪೂರ್ವ ಕರಾವಳಿಯಲ್ಲಿ ಶುಕ್ರವಾರ ರೈಲೊಂದು ಹಳಿ ತಪ್ಪಿ, 34 ಮಂದಿ ಮೃತಪಟ್ಟಿದ್ದಾರೆ. 12ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ’ ಎಂದು ಪೊಲೀಸರು ತಿಳಿಸಿದರು.

ಟೊರೊಕೊ ಜಾರ್ಜ್ ಪ್ರದೇಶದಲ್ಲಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ರೈಲಿನಲ್ಲಿ 350 ಪ್ರಯಾಣಿಕರಿದ್ದರು.

‘ಮೇಲ್ಸೇತುವೆಯಿಂದ ಟ್ರಕ್‌ ಆಯತಪ್ಪಿ ಕೆಳಗಿರುವ ರೈಲ್ವೆ ಹಳ್ಳಿ ಮೇಲೆ ಬಿದ್ದಿದೆ. ಇದೇ ವೇಳೆ ಸುರಂಗದೊಳಗಿನಿಂದ ಬರುತ್ತಿದ್ದ ರೈಲು, ಟ್ರಕ್‌ಗೆ ಅಪ್ಪಳಿಸಿ, ಹಳಿ ತಪ್ಪಿದೆ. ರೈಲಿನ ಹೆಚ್ಚಿನ ಭಾಗ ಈಗಲೂ ಸುರಂಗದಲ್ಲಿಯೇ ಸಿಲುಕಿದೆ. ಕೆಲವು ಪ್ರಯಾಣಿಕರು ಅಲ್ಲಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ವರದಿ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.