ADVERTISEMENT

ಜಪಾನ್‌ನಲ್ಲಿ ಲಾಕ್‌ಡೌನ್ ತೆರವು: ರೈಲು ನಿಲ್ದಾಣಗಳಲ್ಲಿ ಜನಜಂಗುಳಿ

ಏಜೆನ್ಸೀಸ್
Published 1 ಅಕ್ಟೋಬರ್ 2021, 8:03 IST
Last Updated 1 ಅಕ್ಟೋಬರ್ 2021, 8:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಟೊಕಿಯೊ: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಆರು ತಿಂಗಳಿನಿಂದ ಜಪಾನ್‌ ದೇಶದಾದ್ಯಂತ ವಿಧಿಸಿದ್ದ ತುರ್ತು ಪರಿಸ್ಥಿತಿಯನ್ನು ಅಂತ್ಯಗೊಳಿಸುತ್ತಿದ್ದಂತೆ, ನೂರಾರು ಮಂದಿ ನೌಕರರು ಉದ್ಯೋಗಕ್ಕಾಗಿ ತಮ್ಮ ಕಚೇರಿಗಳತ್ತ ತೆರಳಲು ಇಲ್ಲಿನ ರೈಲು ನಿಲ್ದಾಣಗಳಲ್ಲಿಜಮಾಯಿಸಿದ್ದರು.

ಕೊರೊನಾ ಸೋಂಕಿನ ತೀವ್ರತೆ ಕ್ಷೀಣಿಸಿರುವುದರಿಂದ, ದೇಶದ ಆರ್ಥಿಕ ಪುನಶ್ಚೇತನಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಸಕ್ರಿಯಗೊಳಿಸುವ ಹಿನ್ನೆಲೆಯಲ್ಲಿ ಸರ್ಕಾರ ತುರ್ತುಪರಿಸ್ಥಿತಿಯನ್ನು ಗುರುವಾರ ಅಂತ್ಯಗೊಳಿಸಿತು.

ಲಾಕ್‌ಡೌನ್ ಅಂತ್ಯವಾಗುತ್ತಿದ್ದಂತೆ, ಆರು ತಿಂಗಳುಗಳಿಂದ ಮನೆಯಿಂದಲೇ ಕೆಲಸ ಮಾಡುತ್ತಿದ್ದ ಸಾವಿರಾರು ನೌಕರರು ತಮ್ಮ ತಮ್ಮ ಕಚೇರಿಗಳಿಗೆ ತೆರಳಲು ಶಿಗವನಾ ರೈಲು ನಿಲ್ದಾಣದಲ್ಲಿ ಜಮಾಯಿಸಿದ್ದರು. ಹೀಗಾಗಿ ನಗರದ ಹಲವು ರೈಲ್ವೆ ನಿಲ್ದಾಣಗಳು ಮತ್ತು ಕಮ್ಯೂಟರ್ ರೈಲುಗಳು ಪ್ರಯಾಣಿಕರಿಂದ ತುಂಬಿಹೋಗಿದ್ದವು.

ADVERTISEMENT

ಲಾಕ್‌ಡೌನ್ ತೆರವುಗೊಳಿಸಿರುವುದರಿಂದ ಆರ್ಥಿಕ ಚಟುವಟಿಕೆಗಳ ಪುನಶ್ಚೇತನಕ್ಕೆ ನೆರವಾಗುವ ಜೊತೆಗೆ, ಜಪಾನಿನ ಆರೋಗ್ಯ ರಕ್ಷಣಾ ವ್ಯವಸ್ಥೆಗಳ ಮೇಲಿನ ಒತ್ತಡವೂ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ದೇಶದಾದ್ಯಂತ ವಿಧಿಸಿದ್ದ ತುರ್ತು ಪರಿಸ್ಥಿತಿ ಹಾಗೂ ನಿರ್ಬಂಧವನ್ನು ತೆರವುಗೊಳಿಸುತ್ತಿರುವುದಾಗಿ ಜಪಾನ್‌ ಪ್ರಧಾನಿ ಯೋಶಿಹಿಡೆ ಸುಗಾ ಮಂಗಳವಾರ ಪ್ರಕಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.