ADVERTISEMENT

ಕೋವಿಡ್‌: ಬ್ರಿಟನ್‌ ಸಾರಿಗೆ ನಿಯಮ ಪರಿಷ್ಕರಣೆ- ಹಳದಿ ಪಟ್ಟಿಗೆ ಭಾರತ

ಪಿಟಿಐ
Published 5 ಆಗಸ್ಟ್ 2021, 7:34 IST
Last Updated 5 ಆಗಸ್ಟ್ 2021, 7:34 IST
.
.   

ಲಂಡನ್‌: ಪೂರ್ಣ ಪ್ರಮಾಣದಲ್ಲಿ ಕೋವಿಡ್‌ ಲಸಿಕೆ ಪಡೆದಿರುವ ಭಾರತದ ಪ್ರಯಾಣಿಕರು ಬ್ರಿಟನ್‌ನಲ್ಲಿ 10 ದಿನಗಳ ಕಾಲ ಹೋಟೆಲ್‌ ಕ್ವಾರಂಟೈನ್‌ನಲ್ಲಿ ಇರಬೇಕಾದ ಅಗತ್ಯವಿಲ್ಲ. ಅದರ ಬದಲಿಗೆ ಅವರು 10 ದಿನಗಳ ಕಾಲ ಮನೆ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ.

ಬ್ರಿಟನ್‌ ಈ ಹಿಂದೆ ಕೆಂಪು ಪಟ್ಟಿಯಲ್ಲಿ ಗುರುತಿಸಿದ್ದ ಭಾರತ, ಯುಎಇ, ಕತಾರ್‌, ಬಹ್ರೇನ್‌ ದೇಶಗಳನ್ನು ಹಳದಿ ಪಟ್ಟಿಗೆ ಸೇರಿಸಿದೆ. ಈ ಬದಲಾವಣೆ ಇದೇ 8ರಿಂದ ಜಾರಿಗೆ ಬರಲಿದೆ ಎಂದು ಬ್ರಿಟನ್‌ ಸಾರಿಗೆ ಕಾರ್ಯದರ್ಶಿ ಗ್ರಾಂಟ್‌ ಶಾಪ್ಸ್‌ ಟ್ವೀಟ್‌ ಮಾಡಿದ್ದಾರೆ.

ಹಳದಿ ಪಟ್ಟಿಯಲ್ಲಿ ಬರುವ ದೇಶಗಳ ಪ್ರಯಾಣಿಕರು ತಮ್ಮ ದೇಶದ ನಿರ್ಗಮನಕ್ಕೂ ಮೂರು ದಿನಗಳ ಮೊದಲು ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿರಬೇಕು. ಬ್ರಿಟನ್‌ಗೆ ಬಂದ ಮೇಲೆ ಎರಡು ಕೋವಿಡ್‌ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ ಎಂಬ ನಿಯಮಗಳಿವೆ.

ADVERTISEMENT

18 ವರ್ಷದೊಳಗಿನವರು ಮತ್ತು ಬ್ರಿಟನ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಲಸಿಕೆ ಹಾಕಿಸಿಕೊಂಡವರಿಗೆ ಮನೆ ಕ್ವಾರಂಟೈನ್ ನಿಂದ ವಿನಾಯಿತಿ ನೀಡಲಾಗಿದೆ. ಅದೇ ರೀತಿಯ ವಿನಾಯಿತಿ ಯುರೋಪಿಯನ್‌ ಒಕ್ಕೂಟ ಮತ್ತು ಅಮೆರಿಕದಲ್ಲಿ ಎರಡು ಡೋಸ್‌ ಕೋವಿಡ್‌ ಲಸಿಕೆ ಪಡೆದವರಿಗೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.