ADVERTISEMENT

ಆಗಸ್ಟ್ 15ರಂದು ಅಮೆರಿಕದ ಟೈಮ್ಸ್ ಸ್ಕ್ವೇರ್‌ನಲ್ಲಿ ಭಾರತೀಯರಿಂದ ಧ್ವಜಾರೋಹಣ

ಪಿಟಿಐ
Published 11 ಆಗಸ್ಟ್ 2020, 1:24 IST
Last Updated 11 ಆಗಸ್ಟ್ 2020, 1:24 IST
ತ್ರಿವರ್ಣ ಧ್ವಜ
ತ್ರಿವರ್ಣ ಧ್ವಜ   

ನ್ಯೂಯಾರ್ಕ್: ಆಗಸ್ಟ್ 15ರಂದು ಅಮೆರಿಕದಲ್ಲಿರುವ ಭಾರತ ಮೂಲದ ಜನರ ಪ್ರಮುಖ ಗುಂಪೊಂದು ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಲಿದೆ.

ನ್ಯೂಯಾರ್ಕ್, ನ್ಯೂಜೆರ್ಸಿ ಮತ್ತು ಕನೆಕ್ಟಿಕಟ್ ಈ ಮೂರು ಪ್ರದೇಶದ ಫೆಡರೇಷನ್ ಆಫ್ ಇಂಡಿಯನ್ ಅಸೋಸಿಯೇಷನ್ ಈ ಬಗ್ಗೆ ಮಾಹಿತಿ ನೀಡಿದ್ದು, ಟೈಮ್ಸ್ ಸ್ವೇರ್‌ನಲ್ಲಿ ಧ್ವಜಾರೋಹಣ ಮಾಡುವ ಮೂಲಕ ಇತಿಹಾಸ ರಚಿಸಲಿದ್ದೇವೆ ಎಂದು ಹೇಳಿದೆ.

ಇದೇ ಮೊದಲ ಬಾರಿ ಸಕಲವೈಭವಗಳೊಂದಿಗೆ ತ್ರಿವರ್ಣ ಧ್ವಜಾರೋಹಣ ನಡೆಯಲಿದೆ ಎಂದು ಸಂಘಟನೆ ಹೇಳಿದೆ. ಈ ಕಾರ್ಯಕ್ರಮದಲ್ಲಿ ನ್ಯೂಯಾರ್ಕ್‌ನಲ್ಲಿ ಕನ್ಸುಲ್ ಜನರಲ್ ಆಫ್ ಇಂಡಿಯಾ ಆಗಿರುವರಣಧೀರ್ ಜೈಸ್ವಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ADVERTISEMENT

ಟೈಮ್ಸ್ ಸ್ಕ್ವೇರ್‌ನಲ್ಲಿ ಧ್ವಜಾರೋಹಣ ಮತ್ತು ಎಂಪೈರ್ ಸ್ಟೇಟ್ ಕಟ್ಟಡದಲ್ಲಿ ಆಗಸ್ಟ್ 14ರಂದು ತ್ರಿವರ್ಣಧ್ವಜದ ಮೂರು ಬಣ್ಣಗಳನ್ನು ಮಿನುಗಿಸಲಾಗುವುದು ಎಂದು ಸಂಘಟನೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.